ದೇವರ ಕಾಡು

ದೇವರಕಾಡು ಪುಸ್ತಕ ಪರಿಚಯ

Where to buy

India Outside India
Print Version
E Book
Audio Book

ದೇವರ ಕಾಡು

ಈಗಿನ ಮಾಹಿತಿ ಯುಗದಲ್ಲಿ, ನಮ್ಮ ಕಲ್ಪನಾ ಸಾಮಥ್ರ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಮಾಜಿಕ ಜೀವನದ ಬದಲಾವಣೆಗಳಾಗುತ್ತಿವೆ. ಈ ವೇಗ ಎಷ್ಟಿದೆ ಎಂದರೆ, ಒಂದು ಸಣ್ಣ ಅಪಘಾತವಾದರೂ ಇಡೀ ಸಾಮಾಜಿಕ ನೆಲೆಗಟ್ಟು, ಮತ್ತೆ ಚೇತರಿಸಿಕೊಳ್ಳಲಾಗದಂತೆ ನಾಶವಾಗುವ ವೇಗ. ಈ ವೇಗಕ್ಕೆ ಕಡಿವಾಣ ಹಾಕುವ ಮಾತನಾಡಿದರೆ, ಪ್ರಗತಿ ವಿರೋಧಿ ಎನಿಸಿಕೊಳ್ಳಬೇಕಾಗುತ್ತದೆಯೋ ಏನೋ. ಎಲ್ಲೋ ಒಂದು ಕಡೆ ನಮ್ಮ ಸಾಂಸ್ಕøತಿಕ ಹಿನ್ನೆಲೆಯನ್ನೂ ಬಿಡದೆ, ಪ್ರಗತಿಯನ್ನೂ ತಿರಸ್ಕರಿಸದೆ, ಎಚ್ಚರಿಕೆಯಿಂದ ಸಮಾಜವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇದೆ ಅನ್ನಿಸುತ್ತದೆ. ಅಂತಹ ಉದ್ದೇಶ ಈ ಕಥೆಗಳಲ್ಲಿ ಕಂಡುಬಂದಲ್ಲಿ ಅದು ಸಹೃದಯ ಓದುಗರ ಸ್ಪಂದನೆಯೆಂದೇ ಭಾವಿಸುತ್ತೇನೆ.

ವಿವೇಕವಿಲ್ಲದ ಜ್ಞಾನ ದುಃಖವನ್ನು ತರುತ್ತದೆ, ಹಾಗೆಯೇ ವೇದಾಂತವಿಲ್ಲದ ವಿಜ್ಞಾನ ವಿನಾಶವನ್ನು ತರುತ್ತದೆ. ಇಂತಹ ವಿಜ್ಞಾನದ ಬಳಕೆ ಇಂದು ಅತಿಯಾದ ಕಾರಣದಿಂದಾಗಿ, ಸಮಾಜದಲ್ಲಿ ಭೌತಿಕ ಸಂಪತ್ತಿನ ಮೋಹವೂ, ಪಾರಮಾರ್ಥಿಕ ವಿಷಯಗಳ ಬಗ್ಗೆ ಅತೀವ ನಿರ್ಲಕ್ಷ್ಯವೂ ಕಂಡುಬರುತ್ತಿದೆ. ಮನುಷ್ಯನ ಹೊರಗಿನ ಚಟುವಟಿಕೆಗಳನ್ನು ವಿಜ್ಞಾನ ವಿಮರ್ಶೆ ಮಾಡುತ್ತದೆ. ಆದರೆ ಮನುಷ್ಯನ ಒಳಗಿನ ಚಟುವಟಿಕೆಗಳ ಬಗ್ಗೆ ಅದು ಸಂಬಂಧ ಇಟ್ಟುಕೊಂಡಿಲ್ಲ. ಹೀಗಾಗಿ ಮನುಷ್ಯ ಕೂಡ ಒಂದು ಭೌತವಸ್ತುವಾಗಿ ಮಾರ್ಪಾಟಾಗಿದ್ದಾನೆ. ವೈಜ್ಞಾನಿಕ ಮನೋಭಾವವೆಂದರೆ ಬರೀ ಕಾರಣಗಳನ್ನು ಹುಡುಕುವುದಲ್ಲ. ಅದು ಪ್ರತಿಯೊಂದರಲ್ಲೂ ದೈವವನ್ನು ಅನ್ವೇಷಿಸುವ ಸ್ವಭಾವ. ಅದೇ ಸತ್ಯಾನ್ವೇಷಣೆಯೆಂದು ಹಿರಿಯರು ಹೇಳುತ್ತಾರೆ. ಈ ಬಾಹ್ಯ ಪ್ರಕೃತಿ ಹಾಗೂ ಆಂತರಿಕ ಪ್ರಕೃತಿಯ ಸಮ್ಮಿಳನವನ್ನು ಈ ಕಥೆಗಳಲ್ಲಿ ಅಡಗಿಸಿಡುವ ಸಣ್ಣ ಪ್ರಾಮಾಣಿಕ ಪ್ರಯತ್ನ ನನ್ನದು.

ಯಾವುದಕ್ಕೂ ಸಮಯ ಸಿಗದ ಇಂದಿನ ಜೀವನ ಶೈಲಿಯ ನಡುವೆ ಓದಲು ಸಮಯ ಮೀಸಲಿಡುವ, ಅಕ್ಷರಾಭಿಮಾನಿಗಳಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಸಾಲದು. ಎರಡು-ಮೂರು ಪುಟಗಳ ಚುಟುಕು ಕಥೆಗಳಾದರೆ ಕಣ್ಣಾಡಿಸಿಬಿಡಬಹುದು. ಆದರೆ ನೀಳ್ಗತೆ, ಕಾದಂಬರಿಗಳು ಓದುಗರ ಹೆಚ್ಚಿನ ಸಮಯ ಬೇಡುತ್ತವೆ. ಹಾಗಾಗಿ ಕಥೆಯ ನಿರೂಪಣೆಯು ಬರೆದವನ ಭಾವನೆಗಳನ್ನು ಓದುಗರ ಮನದಲ್ಲಿಯೂ ಮೂಡಿಸಿದರೆ ಆ ಬರವಣಿಗೆ ಸಾರ್ಥಕವೆಂದು ಎನಿಸಿಕೊಳ್ಳುತ್ತದೆ.


ಈ ಪುಸ್ತಕದ ಬಗ್ಗೆ ಸಹೃದಯರ ವಿಮರ್ಶೆ/ಅಂಕಣಗಳು


%d bloggers like this: