
Where to Buy

2D, 3Dಗಳ ಬಗ್ಗೆ ಈಗಾಗಲೇ ನಮಗೆಲ್ಲ ತಿಳಿದಿದೆ. ಆದರೆ ಏನಿದು 4D? ಅತ್ಯಂತ ಆಧುನಿಕವಾದ ಯುಗದಲ್ಲಿ 4D (Fourth Dimension-ನಾಲ್ಕನೇ ಆಯಾಮ)ದ ಬಗ್ಗೆ ತಿಳಿಯಬೇಕೆಂದರೆ ಈ ಕಾದಂಬರಿಯನ್ನು ಓದಲೇಬೇಕು.
ಈಗಾಗಲೇ “ದೇವರ ಕಾಡು”, “ಮಿಂಚಿನ ಬಳ್ಳಿ”, “ಅಗರ್ತ” ಗಳಂತಹ ಭಿನ್ನ ಭಿನ್ನ ತಾಂತ್ರಿಕ ವಸ್ತು ವಿಷಯಗಳನ್ನು ಇಟ್ಟುಕೊಂಡು ನೀಳ್ಗತೆಗಳನ್ನು ರಚಿಸಿರುವ ಶ್ರೀಯುತ ಗುರುಪಾದ ಬೇಲೂರು ರವರು ವೈಜ್ಞಾನಿಕ ಕಲ್ಪನೆಯ ಕಥೆಗಳ ಅಭಾವವಿರುವ ಈ ಕಾಲದಲ್ಲಿ ಅದರ ಕೊರತೆಯನ್ನು ನೀಗಿಸುವಂತೆ ‘ಫೋರ್ಡಿ’ ಎಂಬ ಸೈಂಟಿಫಿಕ್ ಥ್ರಿಲ್ಲರ್ ಕಥೆಯನ್ನು ರಚಿಸಿದ್ದಾರೆ.
“ಫೋರ್ಡಿ” ಬುಲೆಟ್ ಟ್ರೈನ್ ನಂತೆ ಕಥೆ ವೇಗವಾಗಿ ಸಾಗುತ್ತಾ, ಜೋಗದ ಜಲಪಾತದಂತೆ ಅಬ್ಬರಿಸುತ್ತದೆ. ಜಲಾಗಾರದಲ್ಲಿ ವಿದ್ಯುತ್ ಪ್ರವಾಹದಂತೆ ಚಲಿಸುತ್ತ, ನದಿಯ ಹೊರಳುಗಳಂತೆ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತ ಅನೇಕ ರಹಸ್ಯಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ.
– ಕಂನಾಡಿಗ ನಾರಾಯಣ