Design a site like this with WordPress.com
Get started

DIVINITY IN NATURE. Prof. Ram

Prof. Sri Ram from AP is a philosopher of different kind. His admirers have summarized his thoughts in a book ” Divinity in Nature”

Wisdom of Nature has been narrated in this book. Wanted to share his thoughts with our Kannada readers, with small comments of the self to make it native.

Divinity in Nature

ದೇವರು ಯಾರು ? ಎಲ್ಲಿದ್ದಾನೆ ? ಹೇಗಿದ್ದಾನೆ ?

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ…ಎಂದರು ಕವಿ ಶಿವರುದ್ರಪ್ಪನವರು. ಕೊನೆಗೆ ಅವನನ್ನು ನಮ್ಮ ಒಳಗೆ ಹುಡುಕಬೇಕು ಎಂದರು.

ದೇವರನ್ನು ಕಾಣುವುದು ಹೇಗೆ ಅನ್ನುವುದಕ್ಕೂ ಮೊದಲು ದೇವರು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯಬೇಕು.

ನಿಮಗೆ ಗೊತ್ತೇ. ನಮ್ಮಲ್ಲಿ ಎರಡು ತರ ದೇವರಿದ್ದಾರೆ. ಒಂದು :ನಾವು ಸೃಷ್ಟಿ ಮಾಡಿದ ದೇವರು. ಎರಡು : ನಮ್ಮನ್ನು ಸೃಷ್ಟಿ ಮಾಡಿದ ದೇವರು.

ನಾವು ಸೃಷ್ಟಿ ಮಾಡಿದ ದೇವರನ್ನು ಹುಡುಕುವ ಅವಶ್ಯಕತೆ ಇಲ್ಲ. ಅವನು ಎಲ್ಲ ಗುಡಿ ಗೋಪುರಗಳಲ್ಲಿ ಸಿಗುತ್ತಾನೆ. ಕ್ಯಾಲೆಂಡರ್ ಗಳಲ್ಲಿ ಢಾಳಾಗಿ ಕಾಣುತ್ತಾನೆ. ರಾತ್ರೋರಾತ್ರಿ ರಸ್ತೆ ಮಧ್ಯೆ ಉದ್ಭವವಾಗುತ್ತಾನೆ.

ನಮ್ಮನ್ನು ಸೃಷ್ಟಿ ಮಾಡಿದ ದೇವರನ್ನು ಹುಡುಕುವುದು ಆತನ ಸಾಕ್ಷಾತ್ಕಾರ ಮಾಡಿಕೊಳ್ಳುವಲ್ಲಿ ಅನುಕೂಲವಾಗಬಹುದು. ಸರಿ ಯಾರು ನಮ್ಮನ್ನು ಸೃಷ್ಟಿ ಮಾಡಿದ್ದು ? ನಮ್ಮ ತಂದೆ ತಾಯಿ ಅಲ್ಲವೇ. ಅವರೇ ತಾನೇ ನಮ್ಮನ್ನು ಈ ಭೂಮಿಗೆ ತಂದಿದ್ದು. ಅವರೇ ದೇವರು ಅಲ್ಲವೇ. ವಿದ್ಯೆ ಕಲಿಸಿದ ಗುರುಗಳು, ನಮಗೆ ಮಾರ್ಗದರ್ಶನ ಮಾಡುವ ಹಿರಿಯರು ಇವರೆಲ್ಲರೂ ನಮಗೆ ಬದುಕಲು ಕಲಿಸಿದವರು. ಇವರೇ ದೇವರುಗಳು ಹೌದೇ ? ಇವರೆಲ್ಲ ದೇವಸಮಾನರು ಹೌದು. ಆದರೆ ಇವರನ್ನೂ ಕೂಡ ಯಾವುದೋ ಶಕ್ತಿ ಸೃಷ್ಟಿ ಮಾಡಿದೆ ತಾನೇ. ಹಾಗಾದರೆ ಇವರನ್ನು ದೇವರು ಅನ್ನಲಾಗುವುದಿಲ್ಲ. ಎಲ್ಲರನ್ನೂ ಸೃಷ್ಟಿ ಮಾಡಿದ ಶಕ್ತಿ ಎಂದರೆ ಈ ಪ್ರಕೃತಿ. Nature. ಪ್ರಕೃತಿ ಎಂದರೆ ಏನು. ಮರ ಗಿಡ ಕಲ್ಲು ಮಣ್ಣು ಗಳೇ ? ಪ್ರಕೃತಿ ಎಂದರೆ ಪಂಚಭೂತಗಳು. ಗಾಳಿ, ಬೆಂಕಿ, ನೀರು, ಭೂಮಿ,ಆಕಾಶ ಇವುಗಳಲ್ಲಿ ಒಂದು ಲೋಪವಾದರೂ ಜೀವಿಗಳು ಇರಲಾರವು. ಹಾಗಾಗಿ ಇವೇ ದೇವರುಗಳು. ಇದೇ creation.

ಇವುಗಳ creator ಈ creation ಒಳಗೇ ಇದ್ದಾನೆ. ಅಂದರೆ ಸೃಷ್ಟಿಯ ಒಳಗೆ ಸೃಷ್ಟಿಕರ್ತನೂ ಇದ್ದಾನೆ. ನಾವು ಸೃಷ್ಟಿಕರ್ತನನ್ನು ಹುಡುಕಿಕೊಂಡು ಎಲ್ಲೋ ಹೋಗುವ ಅಗತ್ಯವಿಲ್ಲ. ಅವನನ್ನು ಸೃಷ್ಟಿಯ ಒಳಗೇ ನೋಡಬಹುದು.

ನಿಮಗೊಂದು ವಿಷಯ ಗೊತ್ತೇ. ನಾವು ದೇವರು ಅಥವಾ ರಾಕ್ಷಸರು ಎಂದು ಪರಿಗಣಿಸುವುದು ಅವರು ನಮಗೆ ಎಷ್ಟು ಒಳ್ಳೆಯವರು ಅಥವಾ ಕೆಟ್ಟವರು ಎನ್ನುವುದರ ಮೇಲೆ ಮಾತ್ರ.

ನೆಲದಲ್ಲಿ ಬೆಳೆದ ಹುಲ್ಲಿಗೆ ಜಿಂಕೆ ರಾಕ್ಷಸನಾಗುತ್ತದೆ, ಜಿಂಕೆಗೆ ಹುಲಿ ರಾಕ್ಷಸ ನಾದರೆ, ಹುಲಿಗೆ ಮನುಷ್ಯ ರಾಕ್ಷಸ ನಾಗುತ್ತಾನೆ.

ಅದೇ ಹುಲ್ಲಿಗೆ ಹುಲಿ ದೇವರಾದರೆ, ಜಿಂಕೆಗೆ ಮನುಷ್ಯ ದೇವರಾಗುತ್ತಾನೆ.

Creator ಅಂದರೆ ಅತೀಂದ್ರಿಯ ಶಕ್ತಿ ಉಳ್ಳವನು, ಪವಾಡ ಮಾಡಬಲ್ಲವನು ಅಂತ ನಾವೆಲ್ಲ ಅಂದುಕೊಳ್ಳುತ್ತೇವೆ. ಪವಾಡ ಮಾಡುವರನ್ನು ಕಂಡರೆ ಆತ ಕ್ಷಣದಲ್ಲಿ ದೇವರಾಗಿ ಬಿಡುತ್ತಾನೆ. ಆದರೆ ಈ ಪೃಕೃತಿಯಲ್ಲಿ ದಿನ ನಿತ್ಯ ನಡೆಯುವ ಪವಾಡಗಳ ಕಡೆ ನಮ್ಮ ಗಮನವೇ ಹರಿಯುವುದಿಲ್ಲ. ಕುವೆಂಪು ಹೇಳ್ತಾರೆ…ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ..ಅಂತ. ಜೀವಿಗಳ ಬದುಕಿಗೆ ಬೇಕಾದ ಸಿದ್ಧತೆಗಳನ್ನೆಲ್ಲಾ ಮಾಡಿಟ್ಟಿರುವ ಪೃಕೃತಿಯ ನಿಯಮಗಳು ಪವಾಡಗಳಲ್ಲವೇ.

ಕಬ್ಬು ತನ್ನ ಬೇರಿನ ಮೂಲಕ ಮಣ್ಣಿನಲ್ಲಿ ಇರುವ ಸಾರವನ್ನು ಸೆಳೆದು ತನ್ನ ಕಾಂಡಕ್ಕೆ ಕೊಡುವಷ್ಟರಲ್ಲಿ ಸಿಹಿಯಾಗಿ ಪರಿವರ್ತಿಸುತ್ತದೆ. ಇದು ಪವಾಡವಲ್ಲವೇ… ಮಣ್ಣಿನಲ್ಲಿ ಆ ಸಕ್ಕರೆಯನ್ನು ಮೊದಲು ಕಂಡಿದ್ದೀರಾ. ಅದೇ ಮಣ್ಣಿನಲ್ಲಿ ಬೇವು ಕೂಡ ಬೆಳೆಯುತ್ತದೆ. ಅದರ ಬೇರುಗಳು ಅದೇ ಮಣ್ಣಿನ ಸಾರವನ್ನು ಸೆಳೆದು ತನ್ನ ಕಾಂಡಕ್ಕೆ ಕೊಡುತ್ತವೆ. ಆದರೆ ಅಲ್ಲಿ ಸಕ್ಕರೆ ಸಿಗೊಲ್ಲ. ಕಹಿ ಇರುತ್ತದೆ. ನಮ್ಮ ಯಾವ ವಿಜ್ಞಾನಿಗಳು ಹಿಡಿ ಮಣ್ಣನ್ನು ಸಕ್ಕರೆಯಾಗಿ ಪರಿವರ್ತಿಸಬಲ್ಲರು ಹೇಳಿ. ಇದು ಪವಾಡವಲ್ಲವೇ..

ನಾವು ನದಿಗಳಿಗೆ ಡ್ಯಾಮ್ ಗಳನ್ನು ಕಟ್ಟುತ್ತೇವೆ. ಹರಿಯುವ ನದಿಯನ್ನು ನಿಲ್ಲಿಸಲು ಬೃಹದಾಕಾರದ ಕಾಂಕ್ರೀಟ್ ಗೋಡೆಗಳನ್ನು , ಉದ್ದದ ಮಣ್ಣಿನ ಏರಿಯನ್ನು ನಿರ್ಮಿಸುತ್ತೇವೆ. ತಡೆ ಹಿಡಿದ ನದಿಯ ಅಪಾರ ಜಲರಾಶಿಯನ್ನು ನೋಡಿ ವಿಸ್ಮಿತರಾಗುತ್ತೇವೆ. ನಮ್ಮ ಸಾಧನೆಗೆ ನಾವೇ ಬೀಗುತ್ತೇವೆ. ಆದರೆ ಪೃಕೃತಿ ಕಟ್ಟಿದ ಡ್ಯಾಮ್ ನಿಮ್ಮ ಕಣ್ಣಿಗೇಕೆ ಬಿದ್ದಿಲ್ಲ. ವಿಶ್ವದ ಜಲರಾಶಿಯನ್ನೆಲ್ಲ ಸಂಗ್ರಹಿಸುವ ವಿಶಾಲ ಸಾಗರಕ್ಕೆ ಕಟ್ಟಿರುವ ಡ್ಯಾಮ್ ನ ಗೋಡೆ ಎಲ್ಲಾದರು ಕಣ್ಣಿಗೆ ಬಿದ್ದಿದಿಯೇ.. ಯಾವ technology ಬಳಸಿ ಈ ಡ್ಯಾಮ್ ಅನ್ನು ಪ್ರಕೃತಿ ಕಟ್ಟಿದೆ ಹೇಳಿ

ಮತ್ತೆ ಅದರ ಅತೀ ನವೀನ ತಂತ್ರಜ್ಞಾನವನ್ನು ಮಾನವನಿಗೆ ಸರಿಗಟ್ಟಲು ಸಾಧ್ಯವೇ ನೋಡಿ.

ಈ ಡ್ಯಾಮ್ ತುಂಬಲು ಮಳೆ ತರಿಸುತ್ತದೆ. ನದಿಗಳ inflow ಸಮುದ್ರ ಸೇರುವಂತೆ ಮಾಡುತ್ತದೆ. ಮತ್ತೆ ಈ ನೀರನ್ನು ಆವಿಯಾಗಿಸುತ್ತದೆ. ಅದನ್ನು ಮೇಲೆ ಕಳುಹಿಸಿ ಮೋಡವಾಗಿಸುತ್ತದೆ. ಮೋಡ ಮಳೆ ಸುರಿಸಿ ನೀರನ್ನು ಜನರಿಗೆ ತಲುಪಿಸುತ್ತದೆ. ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ installment ನಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸುತ್ತದೆ. ಯಾವುದೇ ಖರ್ಚಿಲ್ಲದೆ ನೀರು ಪೂರೈಕೆ ಮಾಡುವ ಬೇರೆ ಯಾವುದೇ ವ್ಯವಸ್ಥೆ ಇದ್ದರೆ ಹೇಳಿ. ಇದು ಪವಾಡವಲ್ಲವೇ.

ಆಮೇಲೆ ನಿಮಗೆ ಇನ್ನೊಂದು ಅಚ್ಚರಿಯ ವಿಷಯ ಹೇಳಬೇಕು. ಮಳೆಗಾಲದಲ್ಲಿ ಮೋಡಗಳು ಮಳೆ ಸುರಿಸಿ ಕಾಲಿಯಾದವೇನೋ ಸರಿ. ಆದರೆ ಬೇಸಿಗೆಯಲ್ಲಿ ಬಿಸಿಲಿಗೆ ನೀರು ಆವಿಯಾದದ್ದು ಎಲ್ಲಿ store ಆಗುತ್ತದೆ ತಿಳಿದಿದಿಯೇ. ಬೇಸಿಗೆಯಲ್ಲಿ ಒಂದೂ ಮೋಡವೂ ಇರುವುದಿಲ್ಲ ಅಂದ ಮೇಲೆ ಅವಿಯಾದ ನೀರು ಎಲ್ಲಿ ಸಂಗ್ರಹವಾಗುತ್ತದೆ. ಇದು ವಾತಾವರಣದಲ್ಲಿ ಸಂಗ್ರಹವಾಗುತ್ತದೆ. ಪ್ರಕೃತಿ ಇದನ್ನ ಎಷ್ಟು ಚೆನ್ನಾಗಿ manage ಮಾಡುತ್ತೆ ನೋಡಿ. ಬೆಳಕು ಕಡಿಮೆ ಆಗದ ಹಾಗೆ, ಬೆಳಕೂ ಜೀವಿಗಳಿಗೆ ಬೇಕು ತಾನೇ. ಸೂರ್ಯನನ್ನು ಮರೆ ಮಾಡದ ಹಾಗೆ ನೀರನ್ನು ಅಡಗಿಸಿ ಇಡುತ್ತೆ. ಇದನ್ನೆಲ್ಲಾ ನಾವು ಅರ್ಥ ಮಾಡಿಕೊಂಡರೆ ದೇವರು ನಮಗೆ ಚೆನ್ನಾಗಿ ಅರ್ಥವಾಗುತ್ತಾನೆ.

ಭಗವದ್ಗೀತೆಯನ್ನ ನೀವು ಪೃಕೃತಿಯ ಈ ಚಟುವಟಿಕೆಗೆ ಹೋಲಿಸಿಕೊಳ್ಳಿ.

ಮಳೆಯನ್ನ ನೀವು ಪ್ರೀತಿಸ್ತಿರಿ…ಇದು ಭಕ್ತಿ ಯೋಗ

ಮಳೆ ಹೇಗಾಗುತ್ತೆ ಅಂತ ನಿಮಗೆ ಗೊತ್ತು… ಇದು ಜ್ಞಾನ ಯೋಗ

ಮಳೆ ನೀರನ್ನ ನೀವು store ಮಾಡ್ತೀರಿ, ಬಳಸಿಕೊಳ್ತೀರಿ…ಇದು ಕರ್ಮ ಯೋಗ

ದೇವರನ್ನ realise ಮಾಡಿಕೊಳ್ಳುವ ಸುಲಭ ವಿಧಾನ ಇದು.

ಮತ್ತೊಂದು ವಿಷಯ ನಿಮಗೆ ಹೇಳಬೇಕು. ನಾವು ಮಕ್ಕಳಿಗೆ ಯಾವಾಗಲೂ ಬುದ್ದಿ ಹೇಳ್ತ ಇರ್ತೀವಿ. ಕಷ್ಟ ಪಟ್ಟರೆ ಫಲ ಸಿಗುತ್ತೆ. ನಾವು extraordinery ಆಗ್ಬೇಕು ಅಂದರೆ ತುಂಬಾ ಶ್ರಮ ವಹಿಸ ಬೇಕು. ಕಷ್ಟ ಪಡಬೇಕು ಅಂತ. ಆದರೆ ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಮ್ಮ ಸಂತೋಷಕ್ಕೆ ಏನೇನು ಅಗತ್ಯ ಇದೆ ಅದನ್ನೆಲ್ಲ ಪ್ರಕೃತಿ ಈಗಾಗಲೇ ನಮಗೆ ಕೊಟ್ಟಿದೆ. ಅದನ್ನು ಬಿಟ್ಟು ಕಷ್ಟಪಡೋದಿಕ್ಕೆ ನಮಗೆ ಬಹಳ ಇಷ್ಟ. ಈಗ ನೋಡಿ. ಬದುಕಲಿಕ್ಕೆ ನಾವು ಪ್ರತಿ ಕ್ಷಣ ಉಸಿರಾಡಬೇಕು. ಅದನ್ನ ಈ ಪ್ರಕೃತಿ ನಮಗೆ ಎಷ್ಟು ಸುಲಭ ಮಾಡಿಕೊಟ್ಟಿದೆ. ಎಷ್ಟು effortless ವ್ಯವಸ್ಥೆ ಇದೆ. ಉಸಿರಾಡೋದೆ ಕಷ್ಟ ಪಟ್ಟು ಕಲಿಯುವ ವಿದ್ಯೆ ಆಗಿದ್ದರೆ ಮನುಷ್ಯನ, ಎಲ್ಲ ಜೀವಿಗಳ ಪಾಡೇನು ಆಗ್ತಿತ್ತು ಯೋಚನೆ ಮಾಡಿ. ಉಸಿರಾಟವನ್ನು ಕಲಿಯುವ ಪರಿಸ್ಥಿತಿ ಇದ್ದರೆ ಜೀವನ ಎಷ್ಟು ಜಟಿಲವಾಗುತ್ತಿತ್ತು (ಈಗ ಅದನ್ನೂ ಪ್ರಾಣಾಯಾಮ ಅಂತ ಕಲಿಯಬೇಕಾಗಿದೆ)

ಪ್ರಕೃತಿ ನಿಮಗೆ ಬದುಕಲಿಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ. ಅವುಗಳನ್ನು ಬಿಟ್ಟು ಬೇರೆ ಕಲಿಯುವ ಅವಶ್ಯಕತೆ ಇಲ್ಲ.

ಆದ್ದರಿಂದ ಜೀವನದಲ್ಲಿ ನಮ್ಮ ಗುರಿ ಏನು ಅಂತ ಅಂದರೆ , ನೆಮ್ಮದಿಯ ಬದುಕು ನಡೆಸುವುದು, ಶಾಂತಿಯ ಬದುಕು ಹೊಂದುವುದು, ಸಂತೋಷದ, ಆರೋಗ್ಯದ ಬಾಳು ಹೊಂದುವುದು ಅಲ್ಲವೇ. ಇವುಗಳನ್ನು ಹೊರತು ಪಡಿಸಿ ನೀವು ಕಷ್ಟ ಪಟ್ಟು ಗಳಿಸಬೇಕು ಅನ್ನೋದಿದ್ದರೆ ಅದು ನಿಮ್ಮ laxury ಗಾಗಿ ಮಾತ್ರ.

ಒಳ್ಳೆಯ ಕೆಲಸ, ಒಳ್ಳೆ ಸಂಬಳ, ಒಳ್ಳೆ ಕಾರು, ಬಂಗಲೆ, ಒಡವೆ, ವಸ್ತ್ರ, ಇವೆಲ್ಲ ಬದುಕಲು ಬೇಕಾದ ಸೌಲಭ್ಯಗಳಲ್ಲ. ಐಷಾರಾಮಿ ಜೀವನಕ್ಕೆ ಬೇಕಾದವು ಅಷ್ಟೇ. ನಾವು ನೆನಪಿಡ ಬೇಕಾಗಿದ್ದು ಕೊರಳ ಸರಕ್ಕಿಂತ ಕೊರಳು ಮುಖ್ಯ ಎಂಬುದನ್ನು. ಬೆರಳ ಉಂಗುರಕ್ಕಿಂತ ಬೆರಳು ಮುಖ್ಯ ಎಂಬುದನ್ನು.

ಆದ್ದರಿಂದ ಬದುಕುವುದು ನಮ್ಮ ಗುರಿ ಆಗಬೇಕು.

ನದಿಗಳ ಗುರಿ ಏನು ? ಸಮುದ್ರ ಸೇರುವುದು. ಸಮುದ್ರದ ಗುರಿ ಏನು. ಹಾಗೆ ಇರುವುದು. ಸಮುದ್ರ ಹಾಗೆ ಇರುವುದರಿಂದ ಜೀವಿಗಳ ಬದುಕು ಸುಗಮವಾಗಿದೆ. ಬದುಕಲಿಕ್ಕೆ ಏನು ಬೇಕಾಗಿದೆಯೋ ಅದೆಲ್ಲವನ್ನೂ ಪ್ರಕೃತಿ ನಮಗೆ ಒದಗಿಸಿದೆ. ಕಣ್ಣು ಕೊಟ್ಟಿದೆ. ನೋಡಲು ಬೆಳಕು ಕೊಟ್ಟಿದೆ. ಬಾಯಾರಿಕೆ ಕೊಟ್ಟಿದೆ. ಜೊತೆಗೆ ನೀರನ್ನೂ ಇಟ್ಟಿದೆ. ಹಸಿವು ಕೊಟ್ಟಿದೆ. ಆಹಾರವನ್ನೂ ಒದಗಿಸಿದೆ. ಇಂತಹ ಮುತ್ಸದ್ದಿ architect ಅನ್ನು ಇನ್ನೆಲ್ಲೂ ಕಾಣಲು ಸಾಧ್ಯ. ಹದಿನೆಂಟು ಲಕ್ಷ ಜೀವಿಗಳಿಗೂ ಅಷ್ಟು ತರಹ ವಿನ್ಯಾಸ, ಅಷ್ಟು ತರಹ ಆಹಾರ, ಅಷ್ಟು ತರಹದ ಜೀವನ. ಇನ್ನೇನು ಉದಾಹರಣೆ ಬೇಕು ಹೇಳಿ.

ಸಣ್ಣ example ಅಂದರೆ ಗುಡ್ಡಗಾಡಿನ ಜನರನ್ನ ಕುಳ್ಳರನ್ನಾಗಿ ಮಾಡುತ್ತದೆ. ನೇಪಾಳದಲ್ಲಿ ಜನ ಎತ್ತರವಿರುವುದಿಲ್ಲ. ಕಾರಣ ಪರ್ವತಗಳನ್ನು ಹತ್ತಿಳಿಯುವಾಗ gravity ಗೆ ಎದುರಾಗಿ ಬಲ ಪ್ರಯೋಗ ಮಾಡಬೇಕಾಗುತ್ತದೆ. ಎತ್ತರವಿದ್ದರೆ ಇದು ತ್ರಾಸದಾಯಕ. Against gravity ಯಲ್ಲಿ ಬೀಳ ಬಾರದು ಅಂತ ಈ design !

ಇಷ್ಟು intelligent ಇರೋ ಪ್ರಕೃತಿ ಜೀವಿಗಳಲ್ಲಿ ಆಸೆ ಏಕೆ ಇಟ್ಟಿತು? ಭಾವನೆಗಳನ್ನ ಏಕೆ ತುಂಬಿತು? ಮತ್ತೆ ಆಸೆಗೆ ಮಿತಿ ಇಲ್ಲದ ಹಾಗೆ ಮಾಡಿ ಬಿಟ್ಟಿದೆ. ಇದು mistake ಅಲ್ಲವೇ?

ನೆನಪಿರಲಿ. Presence of desire and its insatiability is the master stroke of Natures genius and not mistake.

ನಮಗೆ ಹಸಿವಾಗುತ್ತೆ. ಊಟ ಮಾಡ್ತೇವೆ. ಅದು ಜೀರ್ಣವಾದ ಮೇಲೆ ಮತ್ತೆ ಹಸಿವಾಗುತ್ತೆ. ಮತ್ತೆ ಊಟದ ಮೇಲೆ ಆಸೆ ಆಗುತ್ತೆ. ಮನುಷ್ಯನಿಗೆ, ಇತರೆ ಜೀವಿಗಳಿಗೆ , ಆಸೆಯೇ ಇಲ್ಲದೆ ಹೋಗಿದ್ದರೆ ಯಾರೂ ಜೀವನವನ್ನೇ ಮಾಡುತ್ತಿರಲಿಲ್ಲ. ಎಷ್ಟು ಬುದ್ದಿ ಪೂರ್ವಕ ಡಿಸೈನ್ ನೋಡಿ.

ಆದರೆ ನಾವು ಈ ಆಸೆಯನ್ನ ನಾವು ಮಾಡಿಕೊಂಡ ವಸ್ತುಗಳ ಮೇಲೆ ಹರಿಸಿ ದುಃಖ ಪಡ್ತೇವೆ. ನಿಮಗೆ ಗೊತ್ತಿದೆ. ಅತಿಯಾದದ್ದು ಎಲ್ಲವೂ ವಿಷವೇ ಆಗುತ್ತದೆ.

ಮಳೆ ಅತೀ ಆದರೆ ಪ್ರವಾಹ ಉಂಟಾಗುತ್ತದೆ. ಬಿಸಿಲು ಜಾಸ್ತಿ ಆದರೆ ಬರ ಬರುತ್ತದೆ. ಹಾಗಾಗಿ ಪ್ರಪಂಚದಲ್ಲಿ ಬರೀ ಮಳೆ ಇಲ್ಲ. ಬರೀ ಬಿಸಿಲೂ ಇಲ್ಲ. ಹಾಗೆಯೇ ಬರೀ ಸಂತೋಷವೇ ಇಲ್ಲ ಬರೀ ದುಃಖವೇ ಇಲ್ಲ. ಸಂತೋಷ ಇದ್ದ ಕಡೆ ದುಃಖವೂ ಇರುತ್ತದೆ. ದುಃಖ ಕಳೆದ ಮೇಲೆ ಸಂತೋಷವೂ ಬರುತ್ತದೆ. ಇದೇ ಪೃಕೃತಿ ನಿಯಮ. ಇದೆ ದೇವರು.

Author: GurupadaBelur

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು

One thought on “DIVINITY IN NATURE. Prof. Ram”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: