ಹುಟ್ಟಿಸಲು ಬೇಡ, ಸ್ವಾಮಿ ಮುಟ್ಟಿಸಲೂಬೇಡ
ಕಟ್ಟಿಸಲೂಬೇಡ, ನನ್ನ ಕೆಟ್ಟವನೆನಬೇಡ
ಬಿಟ್ಟರೇ ಸಾಕು ಮತ್ತಿನಲ್ಲಿಟ್ಟಿರಬೇಡ
ಸುಟ್ಟರೇ ಸಾಕು ಮತ್ತಲಟ್ಟಲುಬೇಡ
ತಟ್ಟೆಯಾ ದೇಹ ಸುಡಿಸೋ
ಬಟ್ಟೆಯಾ ಬುದ್ದಿ ಬಿಡಿಸೋ
ಚಿಟ್ಟೆಯಾ ಮನವ ನಿಲಿಸೋ
ಒಟ್ಟಿಗೇ ನಿನ್ನ ಸೇರಿಸೋ
ಪಟ್ಟದಾಕುದುರೆ ಮಾಡಿಕೊಂಡಾನೊ
ಸಿಟ್ಟಿನಾಸವಾರನೇರಿಕೊಂಡಾನೊ
ಅತ್ತಿತ್ತಲಾಗಿ ಆಡಿಕೊಂಡಾನೊ
ಕೆಟ್ಟಕಣಿವೇಗೆ ಜಾರಿಕೊಂಡಾನೊ
ಕಟ್ಟುಪಾಡು ಮಾಡೇನಯ್ಯಾ
ಹೊಟ್ಟೆಪಾಡು ನೊಡೇನಯ್ಯಾ
ಚಿತ್ತವೀಡು ನೆಟ್ಟೆನಯ್ಯಾ
ಪುಟ್ಟ ದೀಪ ತೋರಿಸಯ್ಯಾ
ಗುಟ್ಟಲೀರುವೆ ನನ್ನಯ ಹೊಟ್ಟೆಯಲ್ಲಿ
ತಟ್ಟಾಡಿದೆ ಜೀವ ಹಿಡಿಮುಷ್ಠಿಯಲ್ಲಿ
ರಟ್ಟಾಗಿಸೋ ಬಲ ತುಂಬಿ ರಟ್ಟೆಯಲಿ
ಕೊಟ್ಟೋಯ್ಯುವೆ ತೊಟ್ಟ ಸೊರಡ ಜ್ವಾಲೆ
ಥಳುಕಾ ಬಿಟ್ಟು ನೋಡು ಕೇಶವನ ರೂಪವ
ಬೆಳಕಾ ಬಿಟ್ಟು ನೋಡಾವ್ಯಕ್ತನಾ ರೂಪವ
ಪುಳಕಗೊಳಿಸೊ ರೂಪ ನಿನಗೆ ಚನ್ನಕೇಶವ
ಅಳುಕ ಕಳೆಸಿ ಮನುಜಗೆ ನೀಡು ಮೋಕ್ಷವ
18-02-2010