ಹರಿಯ ಬಿಡಲುಬೇಡ ಮನವೇ
ಶ್ರೀ ಹರಿಯ ಬಿಡಲು ಬೇಡ ಮನವೇ
ಚಿತ್ತ ಹರಿಯ ಬಿಡಲು ಬೇಡ
ಮತ್ತೆ ಹರಿಯ ಮರೆಯ ಬೇಡ
ಮುಕ್ತಪ್ರಾಣನಾ ಹರವು ಅರಿವಾಗೋವರೆಗೆ
ಹರಿವ ಜೀವ ನದಿಯ ದಾಟೆ
ಹರಿಯ ಹರಿಗೋಲೇ ಸಾಟಿ
ಹರಿಕಾರನಾ ಕರೆಯೋ ತೀರ ಸೇರೋವರೆಗೆ
ಹರೆಯ ಪಾರ ಮೀರಿ ಹರಿಯೇ
ಹರಿವ ಧಾರೆ ಪಾಪ ಕಳೆಯೇ
ಅರಿಪೀಡನಾ ನೆನೆಯೋ ಹರಕೆ ತೀರೋವರೆಗೆ
ಹರಿವಾಣವ ಹಿಡಿಯಲೇಕೆ
ಹರಿಶಿನವ ಹಚ್ಚಲೇಕೆ
ಹರ್ಯಕ್ಷನಾ ಕರುಣೆ ಪೊರೆದಿರೋವರೆಗೆ
ಹರದಾರಿ ನಡೆಯ ಬೇಡ
ಹರಸಾಹಸ ಪಡಲೂ ಬೇಡ
ಹರಿನಾಮವ ಭಜಿಸೋ ಪಾರುಗಾಣೋವರೆಗೆ
31-03-2010