ಇಂದಿನ ಓದು “ನಿಗೂಢ ನಾಣ್ಯ”

ವಿಟ್ಟಲ್‌ ಶೆಣೈ ರವರ “ನಿಗೂಢ ನಾಣ್ಯ” ಎನ್ನು ಕಾದಂಬರಿ ಓದಿ ಮುಗಿಸಿದೆ. ಕಾದಂಬರಿಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವ ಮತ್ತು ಒಂದೇ ಓದಿಗೆ ಓದಿಸಿಕೊಳ್ಳುವ ಕುತೂಹಲಕಾರಿ ವಿವರಣೆ ತುಂಬಿರುವ ಕಥೆ. ಈಗ ಬಹಳವಾಗಿ ಚಾಲ್ತಿಯಲ್ಲಿರುವ‌ ಹೊಸ ಧನ ವಿನಿಮಯದ ಬಿಟ್‌ ಕಾಯಿನ್ ಬಳಕೆಯ ಬಗ್ಗೆ ಬೆಳಕು ಚೆಲ್ಲುವ ಹಾಗೂ ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕಾದ ಅಂಶಗಳು ಈ ಕಥೆಯಲ್ಲಿವೆ.ಧನ ಮತ್ತು ಹಣದ ವ್ಯತ್ಯಾಸವನ್ನು ಬಹಳ ಸ್ಪಷ್ಟವಾಗಿ ಹಾಗೂ ಬಹಳ ಸರಳವಾಗಿ ವಿವರಿಸಲಾಗಿದೆ. ಧನ ತನ್ನ ಖರೀದಿಯ ಸಾಮರ್ಥ್ಯ ಹಿಗ್ಗಿಸಿಕೊಂಡರೆ, ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ಗೋಲ್ಡ್‌ ಸ್ಟಾಂಡರ್ಡ್‌, ಬ್ರೆಂಟನ್‌ ವುಡ್‌ ಸಿಸ್ಟಮ್‌ , ಡಾಲರ್‌ ಸ್ಟಾಂಡರ್ಡ್‌ ಗಳನ್ನು ವಿವರಿಸುವಾಗ ಕಥೆ ನಿಂತು ಬಿಡುತ್ತದೆ ಎನಿಸಿದರೂ ಅದು ನಮ್ಮನ್ನು ಮುಂದಿನ ಬೆಳವಣಿಗೆಗೆ ತಯಾರು ಮಾಡುತ್ತದೆ. ಡಿಫಿಸಿಟ್‌ ಸ್ಪೆಂಡಿಗ್‌ ಮತ್ತು ಫ್ರಾಕ್ಷನಲ್‌ ರಿಸರ್ವ್‌ ಲೆಂಡಿಂಗ್‌ ಪ್ರಕ್ರಿಯೆಗಳು ನಿಜಕ್ಕೂ ನಮ್ಮನ್ನು ಅಚ್ಚರಿಗೀಡು ಮಾಡುತ್ತವೆ. ಯಾವ ನಶ್ವರ ಸಂಪತ್ತಿಗೋಸ್ಕರ ಯಾರೊಂದಿಗೆ ದಿನನಿತ್ಯ ಹೋರಾಡುತ್ತಿದ್ದೇವೆ, ಅಸ್ತಿತ್ವದಲ್ಲೇ ಇಲ್ಲದ ಮಾಯೆಯ ಹಣಕ್ಕೋಸ್ಕರ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇವೆ ಅಲ್ಲವೇ. ಇದರ ಮಧ್ಯೆ, ಅಮಾಯಕರು ಹಣದುಬ್ಬರದ ಹೊಡೆತಕ್ಕೆ ಸಿಲುಕಿ ನಾಶವಾಗುವ ಪರಿ, ನೀ ಮಾಯೆಯೊಳಗೋ ನಿನ್ನೋಳು ಮಾಯೆಯೋ ಎನಿಸಿಬಿಡುತ್ತದೆ. ಸರ್ಕಾರಗಳ, ಬಂಡವಾಳದಾರರ ಈ ನಯವಂಚನೆಯ ಆಟದ ನಿಜಸ್ವರೂಪ ಇಷ್ಟು ವಿಸ್ತೃತವಾಗಿ ಖಂಡಿತವಾಗಿಯೂ ತಿಳಿದಿರಲಿಲ್ಲ. ಬಿಟ್‌ ಕಾಯಿನ್‌ ಎಂಬುದು ಬ್ಲಾಕ್‌ ಚೈನ್‌ ತಂತ್ರಾಂಶ ವಿಶ್ವಾಸ ಮತ್ತು ನಂಬಿಕೆಯನ್ನು ಕಂಪ್ಯೂಟರ್‌ ಭಾಷೆಯ ಮೂಲಕ ಸಂಗ್ರಹ ಮಾಡಿಕೊಳ್ಳುವ ಒಂದು ಮಹಾನ್‌ ಅನ್ವೇಷಣೆ. ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಈಗಿರುವ ಹಣ ವಿನಿಮಯದ ವ್ಯವಸ್ಥೆ ಬದಲಾಗಿ, ಬಿಟ್‌ ಕಾಯಿನ್‌ ಅಥವಾ ಅದಕ್ಕೂ ಉತ್ತಮ ವ್ಯವಸ್ಥೆ ಬಂದೇ ಬರುತ್ತದೆ. ಇದನ್ನು ಬದಲಿ ಹಣಕ್ಕೆ ಮಾತ್ರವಲ್ಲ, ಭೂ ನೋದಣಿ, ವಾಹನಗಳ ರಿಜಿಸ್ಟ್ರೇಷನ್‌ ಇತ್ಯಾದಿ ವ್ಯವಸ್ಥೆಗಳಿಗೂ ಬಳಸಿಕೊಳ್ಳಬಹುದು ಮತ್ತು ಇದು ಫೂಲ್‌ ಪ್ರೂಫ್‌ ವ್ಯವಸ್ಥೆಯಾಗುತ್ತದೆ ಎಂಬ ಸಾಧ್ಯತೆ ಖುಷಿ ಕೊಡುತ್ತದೆ. ಹೊಸ ತಂತ್ರಜ್ಞಾನದ ಅರಿವು ಮೂಡಿಸುವ ಜೊತೆಗೆ, ನವಿರು ಪ್ರೇಮ ಕಥೆಯನ್ನು ಥಳುಕು ಹಾಕಿರುವುದರಿಂದ ಕಥೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಒಂದೇ ಸಿಟ್ಟಿಂಗ್‌ ನಲ್ಲಿ ಮುಗಿಸಬಹುದು. ಇಂತಹ ಚಂದದ ಕಾನ್ಸೆಪ್ಟ್‌ ಅನ್ನು ಸುಂದರವಾಗಿ ಹೆಣೆದುಕೊಟ್ಟ ವಿಟ್ಟಲ್‌ ಶೆಣೈ ರವರಿಗೆ ಧನ್ಯವಾದಗಳು.ಒಮ್ಮೆ ಓದಲೇ ಬೇಕಾದ ಕಾದಂಬರಿ

Author: GurupadaBelur

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: