ನಾಳೆಯನ್ನು ಗೆದ್ದವನು: ಕಥಾ ವಿಮರ್ಶೆ‌ ಲೇಖಕರು: ನಾಗೇಶ್ ಕುಮಾರ್

ಇ ವಿಮರ್ಶೆ: ನಾಳೆಯನ್ನು ಗೆದ್ದವನು

ಲೇಖಕರು: ನಾಗೇಶ್‌ ಕುಮಾರ್.‌ ವೈಜ್ಞಾನಿಕ ಹಾಗೂ ಪತ್ತೇದಾರಿ ಕಾದಂಬರಿಗಳ ಲೇಖಕರು. ಇವರ ನಾಳೆಯನ್ನು ಗೆದ್ದವನು ಎನ್ನುವ ವೈಜ್ಞಾನಿಕ ಹಿನ್ನಲೆಯ ಕಾದಂಬರಿಯು ಇಂಗ್ಲೀಷ್‌ ಆವೃತ್ತಿಯಲ್ಲಿ ‘Time Renewed’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ ಎಂದಿದ್ದಾರೆ. ಅದನ್ನೂ ಒಮ್ಮೆ ಓದಬೇಕು. ಇದೇ ಲೇಖಕರ ಹಿಮಜಾಲ, ಕರಾಳ ಗರ್ಭ ಕಾದಂಬರಿಗಳನ್ನು ಓದುವ ಕುತೂಹಲ ಹೆಚ್ಚಿದೆ. ಅವುಗಳ ವಿಮರ್ಶೆಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ.

 ಅನುಪಮಾಳನ್ನು ಭಯೋತ್ಪಾದಕರ ಧಾಳಿಯಲ್ಲಿ ಕಳೆದುಕೊಂಡ ಅಭಿಮನ್ಯು, ಅವಳ ನೆನಪಿನಿಂದ ಹೊರಬರಲಾಗದೆ ಒದ್ದಾಡುತ್ತಿರುತ್ತಾನೆ. ತಾನು ಗುಪ್ತಚಾರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆ ಧಾಳಿಯು ತನ್ನನ್ನೇ ಗುರಿ ಮಾಡಿದ್ದೇ ಇರಬೇಕು ಅದಕ್ಕೆ ಅನುಪಮಾ ಅನ್ಯಾಯವಾಗಿ ಬಲಿಯಾದಳು ಎನ್ನುವ ಕೊರಗು ಅವನನ್ನು ಕಾಡುತ್ತಿರುತ್ತದೆ.ಇಂತಹ ಸಮಯದಲ್ಲಿ ಅನ್ಯಗ್ರಹದ ಗಗನ ನೌಕೆ ಅವನನ್ನು ಕರೆದೊಯ್ಯುತ್ತದೆ. ಅಲ್ಲಿಯ ಸನ್ನಿವೇಶ ಅವನನ್ನು ಗಲಿಬಿಲಿಗೆ ದೂಡುತ್ತದೆ.ಅಲ್ಲಿಂದ ಮುಂದೆ ಕಥೆ ವಿಜ್ಞಾನದ ವಿಸ್ಮಯಗಳಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ.

 ಹೆಚ್‌ ಎಂ ಸಿ ಗೆಲಾಕ್ಸಿಯ ಕಾಂಪ್ಲೇಸ್‌ ಗ್ರಹದ ಅತೀ ಬುದ್ದಿವಂತ ಜೀವಿಗಳು ಕಾಸ್ಮಾಸ್‌ ಪೋಲಿಸ್‌ ಆಗಿ ನಮ್ಮ ಭೂಮಿಯನ್ನು ರಕ್ಷಿಸಲು ನಾಯಕನ ಸಹಾಯ ಪಡೆಯುವುದು, ನಾಯಕ ಭಯೋತ್ಪಾದಕರನ್ನು ಅನ್ಯಗ್ರಹವಾಸಿಗಳ ನೆರವಿನಿಂದ ಸದೆಬಡೆಯುವುದು ಸಿನೀಮಿಯವಾಗಿ ಕಾಣುತ್ತದೆ.

ಆದರೆ ವಿಜ್ಞಾನದ ಹಿನ್ನಲೆಯಲ್ಲಿ ಲೇಖಕರು ವಿವರಿಸುವ, ಕಾಲದ, ಕಾಲಯಾನದ, ಭೂತ,ವರ್ತಮಾನ ಮತ್ತು ಭವಿಷ್ಯತ್‌ ಕಾಲದ ನಂಟಿನ  ವಿವರಣೆ ನಮ್ಮನ್ನು ಕಥೆಯೊಂದಿಗೆ ಕಟ್ಟಿಹಾಕುತ್ತದೆ.

ಸೃಷ್ಟಿಯಲ್ಲಿ ಯಾವುದೂ ಕಳೆದು ಹೋಗುವುದಿಲ್ಲ. ರೈಲಿನಲ್ಲಿ ಹೋಗುವಾಗ ನಾವು ಬಿಟ್ಟು ಮುಂದೆ ಹೋದ ಸ್ಟೇಷನ್‌ ಉಳಿದು ಹೋದ ಹಾಗೆ ಭೂತಕಾಲವು ನಮ್ಮ ಜೀವನದ ಆ ಕ್ಷಣದ ಸಾಕ್ಷಿಯಾಗಿ ಉಳಿದುಕೊಳ್ಳುತ್ತದೆ. ನಾವು ಮುಂದೆ ಸಾಗಿದಂತೆ ನಮ್ಮ ಕರ್ಮ ಫಲದ ಅನ್ವಯ ಮುಂದಿನ ಸ್ಟೇಷನ್‌ ತಲುಪುತ್ತೇವೆ. ಅದನ್ನು ನಾವು ತಲುಪಿದಾಗ ಅದು ನಮ್ಮ ವರ್ತಮಾನವಾಗುತ್ತದೆ. ಆ ಭವಿಷ್ಯತ್ತಿನ  ವರ್ತಮಾನವನ್ನು ಬದಲಿಸಿಕೊಳ್ಳಲು ನಾವೇ ಶಕ್ತರಿದ್ದೇವೆ.  ಈ ಸೃಷ್ಟಿಗೆ ನಾವು ಪ್ರೇಕ್ಷಕರು ಆಯಾ ಕಾಲದ ಕಿಂಡಿಯಲ್ಲಿ ಅದರ ದರ್ಶನ ನಮಗಾಗುತ್ತದೆ ಎನ್ನುವಲ್ಲಿ ಆಧ್ಯಾತ್ಮಿಕ ಸಂಕೇತವನ್ನೂ ನೀಡಿರುವಂತಿದೆ.

 ಸಾಪೇಕ್ಷ ಸಿದ್ದಾಂತವನ್ನು ಇಷ್ಟು ಸರಳವಾಗಿ ಹೇಳಬಹುದೆಂದು ಅರಿತಿರಲಿಲ್ಲ. ವೈಜ್ಞಾನಿಕ ಕಥೆಗಳನ್ನು ಬರೆಯುವಲ್ಲಿ ಆಸಕ್ತಿ ಇರುವ ನನಗೆ ಲೇಖಕರು ಈ ವಿಷಯದಲ್ಲಿ ಸೀನೀಯರ್‌ ಆಗಿಬಿಡುತ್ತಾರೆ.

ಹೊಸ ನಾಳೆಗಾಗಿ ಹೊಸ ನಿನ್ನೆಯನ್ನು ಮತ್ತು ಹೊಸ ಇಂದಿನ ದಿನವನ್ನು ಮರು ಸೃಷ್ಟಿ ಮಾಡುವ ಕಲ್ಪನೆ ನಿಜಕ್ಕೂ ಸಾಕಾರವಾಗುವಂತಿದ್ದರೆ ಮಾನವಜನ್ಯ ತಪ್ಪುಗಳೆಲ್ಲವನ್ನೂ ತಿದ್ದಿಕೊಳ್ಳುವ ಅವಕಾಶ ಸಿಕ್ಕಿಬಿಡುತ್ತಿತ್ತು.

ಈ ಕತೆಯನ್ನು ರೋಚಕತೆಗೆ ಮಿತಿಗೊಳಿಸದೆ ಬದುಕಿನ ಆಯಾಮಗಳನ್ನು ವಿಶ್ಲೇಷಿಸುವ ಕೆಲಸವನ್ನೂ ಲೇಖಕರು ಮಾಡಿದ್ದಲ್ಲಿ ಇನ್ನೂ ಅರ್ಥಪೂರ್ಣವಾಗುತ್ತಿತ್ತು. ಅವರಲ್ಲಿ ಆ ಸತ್ವ ಖಂಡಿತವಾಗಿಯೂ ಇದೆ.

ಗುರುಪಾದ ಬೇಲೂರು

Author: GurupadaBelur

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು

2 thoughts on “ನಾಳೆಯನ್ನು ಗೆದ್ದವನು: ಕಥಾ ವಿಮರ್ಶೆ‌ ಲೇಖಕರು: ನಾಗೇಶ್ ಕುಮಾರ್”

  1. ಓದು ಸ್ಪಂದಿಸಿ ಅರ್ಥಪೂರ್ಣ ವಿಮರ್ಶೆ ನೀಡಿದ ನಿಮಗೆ ಅನಂತ ಸಹೃದಯ ಧನ್ಯವಾದಗಳು… ನಿಮ್ಮೊಂದಿಗೆ ಒಮ್ಮೆ ಮಾತಾಡುವುದಿದೆ

    Like

  2. ನಾನು ಸ್ವಲ್ಪ ಮನರಂಜನಾ ಸಾಹಿತ್ಯವನ್ನೇ ಬರೆಯುವುದು!!.. ಸಿನೆಮಾ ಪ್ರಭಾವ ಇರಬಹುದು!!.. ಆಧ್ಯಾತ್ಮಕ ಬರೆಯಲು ಯೋಚಿಸಿಲ್ಲ, ಅವನ್ನು ಓದುತ್ತೇನೆ.. ಪೌರಾಣಿಕ ಭಕ್ತಿ ಸಾಹಿತ್ಯ ಮತ್ತು ಶೈವ ದಂಕಕತೆಗಳನ್ನು ಬರೆದಿದ್ದೇನೆ, ತಮಿಳು ನಯನಮಾರ ಗುರುಗಳ ಪೆರಿಯ ಪುರಾಣಂ ಅನುವಾದಿತ ಕತೆಗಳು.. ಆಸಕ್ತಿಯಿದ್ದರೆ ಕೇಳಿ, ಕಳಿಸುವೆ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: