ದೇವರ ಕಾಡು ಈಗ ಆಡಿಯೋ ರೂಪದಲ್ಲಿ

https://www.pustaka.co.in ನಲ್ಲಿ Team Dhwanidhare ಯವರ ಪ್ರಯತ್ನದಿಂದ ನನ್ನ ಕಥೆ ದೇವರ ಕಾಡು ಆಡಿಯೋ ರೂಪದಲ್ಲಿ ಬಿಡುಗಡೆ ಆಗಿದೆ.

ಇದನ್ನು ಕೇಳಲು ನೀವು ಮಾಡ ಬೇಕಾದ್ದು ಇಷ್ಟೇ

1. https://www.pustaka.co.in ಗೆ ಡೌನ್ ಲೋಡ್ ಮಾಡಿಕೊಳ್ಳಿ. ಲಾಗ್ ಇನ್ ಆಗಿ. ದೇವರಕಾಡು ಆಡಿಯೋ ಬುಕ್ ಸೆಲೆಕ್ಟ್ ಮಾಡಿ . ಸಧ್ಯಕ್ಕೆ ರೆಂಟ್ ಲೆಕ್ಕದಲ್ಲಿ ಲಭ್ಯವಿದೆ..

ಆಡಿಯೋ ಪುಸ್ತಕವನ್ನು ಹಿನ್ನಲೆ ಸಂಗೀತ ಹಾಗೂ ಸಂಭಾಷಣೆ ಗಳೊಂದಿಗೆ ಆಕರ್ಷಕವಾಗಿ ಮಾಡಿದ್ದಾರೆ.

ವಿಠ್ಠಲ್ ಶೆಣೈ ರವರ ಪ್ರತಿಕ್ರಿಯೆ …

ಮಾರಮ್ಮನ ಒಡವೆ

(ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಸಣ್ಣ ಕಥೆ)

ಲೇ ಈರ, ಹೊತ್ತು ಏರ್ತಾ ಬಂದ್ರೂ ಗುಡ್ಲು ಬಿಟ್ಟು ಬರಾಕಾಗಲ್ಲೇನೋ. ನಿನ್ನೆಯಿಂದ ಹೊಯ್ಕಂಡಿದೀನಿ. ಹೊತ್ತಿಗ್ ಮುಂಚೆ ಹಾರು ಕಟ್ರೋ ಅಂತ. ಇನ್ನೂ ಹೆಂಡ್ತಿ ಮಗ್ಲು ಬಿಟ್ಟು ಎದ್ದಿಲ್ಲೇನೋ’

ಗೌಡ ಅಷ್ಟು ಕೂಗಿದ್ರೂ ಕೇರಿ ಬೀದೀಲಿ ಯಾವ ಮಿಸುಕಾಟವೂ ಕಾಣದೆ ಅವನ ಸಿಟ್ಟು ಇನ್ನೂ ಜಾಸ್ತಿಯಾಯಿತು.

‘ಎಲ್ಲಿ ಹಾಳಾಗಿ ಹೋದ್ರೋ …. ತಿಂದ್ ಜಾಸ್ತಿಯಾದ್ರೆ ಹಿಂಗೇ ಅಲ್ವಾ’ ಅಂತಾ ಬುಸುಗುಡುತ್ತಾ ಗೌಡ, ಈರನ ಗುಡ್ಲ ಹತ್ರ ಬಂದ. ರಾತ್ರಿಯ ಮುಸುರೆ ಚೆಲ್ಲಾಕೆ ಅಂತ ಈಚೆಗೆ ಬಂದ ಚನ್ನಿ, ಗೌಡನ್ನ ನೋಡಿ ಗಾಬ್ರಿ ಮಾಡ್ಕಂಡು ಮುಸುರೆ ಪಾತ್ರೇನ ಅಲ್ಲೇ ಕುಕ್ಕಿ, ತಲೆ ಮೇಲೆ ಸೆರಗು ಎಳ್ಕೊಂಡು ಬದಿಗೆ ಸರಿದು ನಿಂತ್ಳು.

Continue reading “ಮಾರಮ್ಮನ ಒಡವೆ”