ಮರಮರ ಮಥಣಿಸಿ…

ಮರಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತು
ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ
ತನು ಗುಣಾದಿಗಳ ಸುಡಲಾಯಿತು
ಇದು ಕಾರಣ ನಿಮ್ಮ ಮಹಾನುಭಾವಿಗಳ ಅನುಭಾವವ ತೋರಿ
ಎನ್ನೊಡಲನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ

ವಚನಗಾರ(ರ್ತಿ):ದು ಅಕ್ಕನ ವಚನ.

ಸಂದರ್ಭ: ಅಕ್ಕ ಅನುಭವ ಮಂಟಪಕ್ಕೆ ಬಂದ ಸಂದರ್ಭವೆಂದು ಕಾಣುತ್ತದೆ. ಇಲ್ಲಿ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ದಿನನಿತ್ಯದ ಚರ್ಚೆಯ ಬಗ್ಗೆ ಹೀಗೆ ವಚನ ಕಟ್ಟಿದಾಳೆ
ಪದಗಳ ಅರ್ಥ: ಮಥನಿಸಿ = ಉಜ್ಜಿ ; ತರು = ಗಿಡ ; ಅನುಭಾವ = ಅನುಭವಕ್ಕಿಂತ ಮಿಗಿಲಾಗಿ (ಇಲ್ಲಿ ಆಧ್ಯಾತ್ಮಜ್ಞಾನ) ;

ಭಾವಾರ್ಥ: ಹೇಗೆ ಕಾಡಿನಲ್ಲಿ ಮರ-ಮರ ಒಂದಕ್ಕೊಂದು ಉಜ್ಜಿ ಕಿಚ್ಚು ಹುಟ್ಟಿ ಸುತ್ತಲಿನ ಮರ-ಗಿಡಗಳನ್ನು ಸುಡುತ್ತದೆಯೋ, ಹಾಗೆಯೇ ಅನುಭವ ಮಂಟಪದಲ್ಲಿ ಆತ್ಮ-ಆತ್ಮ ಮಥನಿಸಿ(ಅಂದರೆ ಶರಣರ ಪರಸ್ಪರ ಚರ್ಚೆ) ಅನುಭಾವ(ಆಧ್ಯಾತ್ಮಜ್ಞಾನ) ಹುಟ್ಟಿ, ಆಸೆ, ಆಮಿಷ ಮೋಹಗಳಂತಹ ತನುಗುಣ/ಅವಗುಣಗಳನ್ನು ಸುಡಲು ಕಾರಣವಾಯಿತು, ಎಂತಲೇ ಅಕ್ಕ ತನ್ನ ಚೆನ್ನಮಲ್ಲಿಕಾರ್ಜುನನಲ್ಲಿ ಈ ಮಹಾನುಭಾವಿಗಳ ಸತ್ಸಂಗವನ್ನು ಒದಗಿಸಿ ಅವರ ವಚನಗಳನ್ನು ಕೇಳುವಂತಾಗಲೆಂದು ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾಳೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: