ಹ್ಯೂ ಯಾನ್ ಶೀನ್ ಕ್ಯಾಸಲ್
ಮಾರನೇ ದಿನ Neuschwanstein castle ಗೆ ಭೇಟಿ. ಅದನ್ನು ಹೇಳುವ ರೀತಿ ಹ್ಯೂ ಯಾನ್ ಶೀನ್ ಕ್ಯಾಸಲ್ ಅಂತ. ಬವೇರಿಯಾದ ರಾಜ ಲ್ಯೂಡ್ ವಿಗ್ ಇದನ್ನು ಕಟ್ಟಿಸಿದ. ಅವನು ಬವೇರಿಯ, ಆಸ್ಟ್ರಿಯಾ,ಮತ್ತು ವೆನಿಸ್ ಗಳನ್ನು ಆಳಿದವನು. ಇದನ್ನು ಅವನು ತನ್ನ ಸ್ವಂತ ಹಣದಿಂದ ಕಟ್ಟಿಸಿದನೆಂದು ಮತ್ತು ಸರ್ಕಾರದ ಬೊಕ್ಕಸದಿಂದ ಹಣ ಪಡೆಯಲಿಲ್ಲವೆಂದು ಅಲ್ಲಿಯವರು ತಿಳಿಸಿದರು. ಹ್ಯಾರಿಪಾಟರ್ ಚಿತ್ರಗಳಲ್ಲಿ ಬರುವ ಕೋಟೆಗಳಂತೆ ಕಾಣುತ್ತಿದ್ದ ಈ ಕ್ಯಾಸಲ್ ಅನ್ನು ಒಂದು ಸೊಗಸು. ಹತ್ತೊಂಬತ್ತನೇ ಶತಮಾನದ ವಾಸ್ತು ಶಿಲ್ಪ ವನ್ನು ಹೊಂದಿದ್ದ ಈ ಕೋಟೆಯನ್ನು ರೋಮನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕೊಳವೆಯಂತಹ ನಿಡಿದಾದ ಟವರ್ ಗಳು. ಅವಕ್ಕೆ ಟೋಪಿಗಳಂತೆ ಹೊದಿಸಿದ ಚೂಪಾದ ಮೇಲ್ಛಾವಣಿಗಳು. ಕಿಂಗ್ ಲುಡ್ವಿಗ್ ತನ್ನ ಸ್ವಂತ ಬಳಕೆಗಾಗಿ ಇದನ್ನು ಕಟ್ಟಿಸಿದರೂ ಅವನು ಇದರಲ್ಲಿ ಕೇವಲ ಹನ್ನೊಂದು ರಾತ್ರಿಗಳನ್ನು ಅಷ್ಟೇ ಕಳೆಯಲು ಸಾಧ್ಯವಾಯಿತು ಎಂದು ಹೇಳುತ್ತಾರೆ.ಅಲ್ಲಿಯೇ ದೂರದಲ್ಲಿ ಇವನೇ ಕಟ್ಟಿಸಿದ ಮತ್ತೊಂದು ಕ್ಯಾಸಲ್ ಇತ್ತು. ಅದರ ಹೆಸರು Hohenshwango. Alps ಪರ್ವತಗಳ ಮಡಿಲಲ್ಲಿ ಈ ಕೋಟೆಗಳಿವೆ. ಬೆಟ್ಟದ ಮೇಲೆ ಹೋಗಲು ಕುದುರೆ ಗಾಡಿಗಳಿದ್ದವು. ಆ ಕುದುರೆಗಳು ಹೇಗಿದ್ದವು ಅಂತೀರಿ. ಒಂದೊಂದು ಆನೆಯ ತರ. ಮೇಲೆ ಹೋಗಲು ಬಸ್ಸುಗಳು ಇದ್ದವು. ನಡೆದುಕೊಂಡೂ ಹೋಗಬಹುದು. 20 ನಿಮಿಷಗಳ ವಾಕ್. ಅಲ್ಲಿ ರಶ್ ಇದ್ದಿದ್ದರಿಂದ ನಾವು ಹತ್ತಿರದಲ್ಲಿ ಇದ್ದ Tegelbergbahn ಎಂಬ ಸ್ಥಳಕ್ಕೆ ಹೋದೆವು.
ಕೇಬಲ್ ಕಾರ್ ನಲ್ಲಿ ಮೇಲೆ ಹೋಗಬೇಕು. ಅಲ್ಲಿಂದ ಆಲ್ಫ್ಸ್ ಬೆಟ್ಟಗಳ ಸಾಲು ನಯನ ಮನೋಹರವಾಗಿ ಕಾಣುತ್ತದೆ. ಜರ್ಮನಿ ಮತ್ತು ಆಸ್ಟ್ರಿಯಾ ಗಳನ್ನು ಈ ಪರ್ವತದ ಸಾಲು ಬೇರೆ ಮಾಡುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 250 ಕಿಮೀ ಅಗಳಕ್ಕೆ 1200 ಕಿಮೀ ಉದ್ದಕ್ಕೆ ಚಾಚಿಕೊಂಡಿರುವ ಆಲ್ಫ್ಸ್ ಪರ್ವತ ಶ್ರೇಣಿ 8 ದೇಶಗಳಲ್ಲಿ ಹರಡಿ ಹೋಗಿದೆ. ನಾವು hill top ನಲ್ಲಿಯೇ ಲಂಚ್ ಮುಗಿಸಿ ಕೊಂಡೆವು. ನಂತರ Hohenshwango ಕ್ಯಾಸಲ್ ಗೆ ಮರಳಿ ಬಂದೆವು. ಈಗ ರಶ್ ಕಡಿಮೆ ಇತ್ತು. ಬಸ್ ಹತ್ತಿ ಮೇಲೆ ಹೋದೆವು. ದಾರಿಯಲ್ಲಿ Marien Brook ಎನ್ನುವ ಬ್ರಿಡ್ಜ್ ಇದೆ. ಇಲ್ಲಿಂದ waterfall ತುಂಬಾ ಚೆನ್ನಾಗಿ ಕಾಣುತ್ತದೆ. Scwangau ಎಂದು ಕರೆಯುವ ಈ ಜಾಗ ಸೌಂದರ್ಯಕ್ಕೆ ಹೆಸರಾಗಿದೆ. ಇಲ್ಲಿ ಜನ ಜನ ಜನ.. ಅಲ್ಲಿಂದ ಕೋಟೆಗೆ ಹೋದೆವು. ಈ ಕೋಟೆ ಒಂದು ಎಂಜಿನೀಯರಿಂಗ್ ಕೌಶಲಕ್ಕೆ ಹೆಸರುವಾಸಿಯಾಗಬಲ್ಲ ಕಟ್ಟಡ.
ಕೆಳಗೆ ಇಳಿಯಲು ಆನೆಯಂಥಹ ಕುದುರೆಗಳು ಎಳೆಯುವ ಗಾಡಿಗಳನ್ನು ಹತ್ತಿದೇವು. ವಾಪಸ್ ಕಾಫ್ ಬರ್ನ್ ಗೆ ಬರುವಾಗ ಒಂದು ಇಂಡಿಯನ್ ಹೋಟೆಲ್ ನಲ್ಲಿ ಊಟ ಮಾಡಿದೆವು. ನಮಸ್ತೆ ಎಂದು ಅದರ ಹೆಸರು. ಇಶಾನ್ ಎಂದು ಮಾಲೀಕನ ಹೆಸರು. ಅವನು ಮುಂಬೈ ನವನು ಎಲೆಕ್ಟ್ರಾನಿಕ್ ಎಂಜಿನೀಯರ್. ಅವನು ಹೇಳಿದ್ದು ಜರ್ಮನಿ ಯಲ್ಲಿ ಹೋಟೆಲ್ ಬಿಸಿನೆಸ್ ಮಾಡಿ ಗೆಲ್ಲಲು ಇಂಡಿಯನ್ಸ್ ಗೆ ಮತ್ತೆ ಪಾಕಿಸ್ತಾನಿ ಹಾಗೂ ಟರ್ಕಿ ಗಳಿಗೆ ಮಾತ್ರ ಸಾಧ್ಯ ಅಂದ.
ಜರ್ಮನಿಯ ಹೋಟೆಲ್ ಗಳಲ್ಲಿ ಸಸ್ಯಾಹಾರಿಗಳು ಬಹಳ ಇಷ್ಟ ಪಡುವ dish ಅಂದರೆ aspharagus ಮತ್ತು ಸಲಾಡ್. ಮಾಂಸಹಾರಿಗಳಿಗೆ Schweinshaxe ಅಂದರೆ ಪೋರ್ಕ್ ಲೆಗ್, ಹಂದಿಯ ಕಾಲು! ಜರ್ಮನಿ ಗೆ ಭೇಟಿ ನೀಡುವ ಎಲ್ಲರೂ ಈ ಎರಡು dish ಗಳ ಟೇಸ್ಟ್ ಮಾಡುವುದು ಕಡ್ಡಾಯ!
ನಮ್ಮ ನಾಯಕ್ ರವರಿಗೆ ಮೀಸೆ ಟ್ರಿಮ್ ಮಾಡೋಕೊಳ್ಳಲು ಸಣ್ಣ ಕತ್ತರಿ ಕೊಳ್ಳ ಬೇಕಿತ್ತು. ಯಾವುದೋ ಸ್ಟೋರ್ ಗೆ ಹೊದೇವು. ಏನು ಕೇಳಬೇಕು. ನಾಯಕ್ ಕೈಯಲ್ಲಿ ಕತ್ತರಿಸುವ ತರ ಆಕ್ಟ್ ಮಾಡುತ್ತ scissors ಇದೆಯಾ ಅಂತ ಕೇಳಿದರು. ಆಕೆ its here ಅಂದಳು… ನಾಯಕ್ where show me ಅಂದರು. ಅವಳು ಅಲ್ಲೇ table ಮೇಲಿದ್ದ ಒಂದು ಕತ್ತರಿ ತೋರಿಸಿದಳು. ಅದನ್ನು ತೆಗೆದು ಕೊಳ್ಳಲು ಹೋದ ನಾಯಕ್ ರನ್ನು ತಡೆದು No.. this.. schere..mine ಅಂದಳು. Schere ಅಂದ್ರೆ scissors ಅಂತ ಗೊತ್ತಾಯ್ತು. ಆ ಸ್ಟೋರ್ ನಲ್ಲಿ ಅದು ಇರಲಿಲ್ಲ ಅವಳ schere ಅನ್ನು ಕೊಡಲು ಆಕೆ ತಯಾರು ಇರಲಿಲ್ಲ!
ಅಂದು ನಾವು ಸ್ಟುಗ್ಗರ್ಟ್ ಗೆ ಹೋದೆವು. ಇದು ಜರ್ಮನಿಯ 6ನೆ ದೊಡ್ಡ ಸಿಟಿ. Mercedes benz ಮತ್ತು Porche ಕಂಪನಿಗಳ ಕೇಂದ್ರ ಸ್ಥಾನ. ಅಲ್ಲಿ ನಾವು ಬ್ಲಾಕ್ ಫಾರೆಸ್ಟ್ ಎಂದು ಕರೆಯಲ್ಪಡುವ ದಟ್ಟ ಅರಣ್ಯ ಪ್ರದೇಶದೊಳಗೆ ಹೋದೆವು. ಸೂರ್ಯನ ಕಿರಣಗಳು ಒಳಗೆ ಇಳಿಯದಂತಹ ಕಾಡು. ಹೊಸ ಮರಗಳು ಪ್ರೌಢ ಅವಸ್ಥೆಗೆ ಬಂದ ನಂತರವೇ ಹಳೆಯ ಮರಗಳ ಕಟಾವು ಮಾಡುತ್ತಿದ್ದರು. ಇಲ್ಲಿ ಟ್ರೆಕ್ಕಿಂಗ್ ಗೆ ಜಾಗ ಮಾಡಿದ್ದಾರೆ. ಕಾಮ್ ಬಾಕ್ ಎನ್ನುವ ಹಳ್ಳಿ ಗೆ ಭೇಟಿ ನೀಡಿ ವಾಪಸ್ ಬರುವಷ್ಟರಲ್ಲಿ ರಾತ್ರಿ 11.30. ನಾವಿದ್ದ ಹಳ್ಳಿಯಲ್ಲಿ May day ಗೆ ತಯಾರಿ ನಡೆದಿತ್ತು.. ರಾತ್ರಿಯೆಲ್ಲ ಮೇ ಡೇ ಆಚರಣೆ ನಡೆಯುತ್ತದೆ ಎಂದು ಹೇಳಿದರು. ರಾತ್ರಿಯೆಲ್ಲಾ ಹಾಡು ಕುಣಿತ ಬಹಳ ಚೆನ್ನಾಗಿರುತ್ತದೆ ಎಂದು ತಿಳಿಸಿದರು. ನಾವು ಸುಮಾರು ಹನ್ನೆರೆಡೂವರೆ ವರೆಗೆ ಕಾಯುತ್ತಿದ್ದೆವು. ಸಮಾರಂಭ ಪ್ರಾರಂಭವಾಗಿರಲಿಲ್ಲ. ನಮ್ಮ ಕಣ್ಣು ಎಳೆಯಲು ಆರಂಭಗೊಂಡವು. ದಿನ ಪೂರ್ತಿ ಬೆಟ್ಟಗುಡ್ಡಗಳನ್ನು ಹತ್ತಿಳಿದು ಆಯಾಸವಾಗಿತ್ತು. ನಿದ್ದೆಹತ್ತಿದ್ದೇ ತಿಳಿಯಲಿಲ್ಲ. ಬವೇರಿಯನ್ ಡ್ಯಾನ್ಸ್ ನೋಡುವ ಅವಕಾಶ ನಮಗೆಮಿಸ್ ಆಯಿತು.
ಬಿ ಎಂ ಡಬ್ಲ್ಯೂ ಮತ್ತು ಹಂದಿಯ ಕಾಲು !
ನಮ್ಮ ಮುಂದಿನ ಭೇಟಿ ಮ್ಯೂನಿಕ್ ನಗರಕ್ಕೆ. ಅಲ್ಲಿ BMW ಷೋ ರೂಮ್ ಗೆ ಹೋದೆವು. ಇಲ್ಲಿಯ ವಸ್ತು ಸಂಗ್ರಹಾಲಯ ನೋಡಲೇ ಬೇಕಾದ ಸ್ಥಳ. ಕಾರು ಪ್ರಿಯರ ಕಾಶಿ. 1929 ರ ಮಾಡೆಲ್ ಗಳಿಂದ ಹಿಡಿದು ಇತ್ತೀಚಿನ ಟ್ರೆಂಡ್ ವರೆಗಿನ ಕಾರುಗಳು. ಕಣ್ಣಿಗೆ ಕಾಣುವ ಕನಸಿನ ಗಾಡಿಗಳ ಒಳಗೆ ಕುಳಿತು ಪೋಸ್ ಕೊಟ್ಟು ಫೋಟೋ ತೆಗಿಸಿಕೊಳ್ಳುವ ಸಂಭ್ರಮ. ಮಗಳಿಗೆ ಹೇಳಿದೆ. ಒಪೆನ್ ಹುಡ್ ಕಾರ್ ನಲ್ಲಿ ಕುಳಿತುಕೊ. ಕ್ಲಿಕ್ ಮಾಡ್ತೇನೆ ಅಂತ. ಹೇ.. ನೋ..ನಾನು ತಗೊಳ್ಳೋ BMW ನಲ್ಲೇ ಕುಳಿತು ಪೋಸ್ ಕೊಡ್ತೇನೆ ಅಂದಳು. ಹೀ ಹೀ … ! ಅವಳನ್ನು ಸಿಟಿ ಸುತ್ತುವಾಗ ಸೈಕಲ್ ರಿಕ್ಷಾ ದಲ್ಲಿ ಕೂರಿಸುವ ಪ್ರೋಗ್ರಾಮ್ ಇತ್ತು ! ಆದರೂ ಹೇಳಿದೆ. ಆಯಿತು ಮಗಳೇ. ಹಾಗೆ ಮಾಡು. ಮೊದಲು ಚೆನ್ನಾಗಿ ಓದು. ಒಳ್ಳೆ ಕೆಲಸಕ್ಕೆ ಸೇರು. ಕಷ್ಟಪಡು ಯಾವುದೂ ಅಸಾಧ್ಯವಲ್ಲ . ಆದರೆ ನಿನ್ನ ಕೋಪ ಬಿಡು. ಶಾರ್ಟ್ ಟೆಂಪರ್ ಇದೆ ನಿನಗೆ ಅಂದೆ. ಅದನ್ನು ನಿಮ್ಮಿಂದಲೇ ಕಲಿತದ್ದು ಅಂತ ತಿರುಗೇಟು ಕೊಟ್ಟಳು ! ಆಗ ನಾನು ಅವಳಿಗೆ ಒಂದು ಕಥೆ ಹೇಳಿದೆ. ಒಬ್ಬ ಅಪ್ಪ ಇದ್ದನಂತೆ. ಅವನಿಗೆ ಇಬ್ಬರು ಮಕ್ಕಳು. ಅಪ್ಪ ತುಂಬಾ ಕುಡುಕ, ಕುಡಿದು ಮನೆಯಲ್ಲಿ ಗಲಾಟೆ. ಅವನ ಇಬ್ಬರು ಮಕ್ಕಳಲ್ಲಿ ಒಬ್ಬ ಅಪ್ಪನಂತೆ ಕುಡುಕ ಕೆಡುಕ ಆಗಿಬಿಟ್ಟಿದ್ದ. ಯಾಕೆ ಹೀಗಾದೆ ಅಂತ ಅವನನ್ನು ಕೇಳಿದಾಗ ನಮ್ಮ ಅಪ್ಪನನ್ನು ನೋಡಿ ಕಲಿತುಬಿಟ್ಟೆ ಅಂದ. ಇನ್ನೊಬ್ಬ ಮಗ ತುಂಬಾ ಒಳ್ಳೆಯವನು. ನೀನು ಹೇಗೆ ಒಳ್ಳೆಯವನಾದೆ ಅಂತ ಕೇಳಿದಾಗ ಅವನೂ ಹೇಳ್ತಾನೆ. ನಮ್ಮಪ್ಪನನ್ನು ನೋಡಿ ಕಲಿತೆ. ಒಬ್ಬ ಮನುಷ್ಯ ಹೇಗಿರಬಾರದು ಎಂದು ಅರಿತುಕೊಂಡೇ ಅಂದ. ಕಥೆ ಮುಗಿಸಿ ಮಗಳಿಗೆ ಹೇಳಿದೆ. ಕಲಿಯುವುದು ನಾವು. ಅದು ಪಾಸಿಟಿವ್ ಕಲಿಕೆಯೋ ಅಥವಾ ನೆಗಟಿವ್ ಕಲಿಕೆಯೋ ಅನ್ನೋದು ನಮ್ಮಲ್ಲಿ ಇರುತ್ತೆ.
ಅಲ್ಲಿಂದ ನಾವು ಸಿಟಿ ವಾಕ್ ಮಾಡಿದೆವು. Karl platz ನಿಂದ marine platz ವರೆಗೆ ವರೆಗೆ ಕಾಲು ಹಾಕಿದೆವು. Rateschieler building ಅನ್ನು ನೋಡಿದೆವು. ಅಲ್ಲಿ pavement ಮೇಲೆ ನಡೆಯುತ್ತಿದ್ದ concert ಬಹಳ ಖುಷಿ ಕೊಟ್ಟಿತು. ನಮ್ಮಲ್ಲಿ ಕೆಲವರು ಹೆಜ್ಜೆ ಕೂಡ ಹಾಕಿದರು.ಮೆಯೊ ಹಾಲ್ ಎಂದು ಕರೆಯುವ ಈ ಕಟ್ಟಡದಲ್ಲಿ 1500 ಸೀಟ್ ಗಳಿರುವ ರೆಸ್ಟೋರೆಂಟ್ ಇತ್ತು. ಉದ್ದಕ್ಕೂ ಸಂಗೀತ..ಕುಣಿತ..ಇದೆಲ್ಲಾ ಮೇ ಡೇ ಸಂಭ್ರಮ.
ಮುಂದೆ ಬಂದಾಗ ಅಲ್ಲಿ ಸೈಕಲ್ ರಿಕ್ಷಾ ಗಳು ನಿಂತಿದ್ದವು. 35 ಯುರೋ ಕೊಟ್ಟರೆ ಸಿಟಿ ರೌಂಡ್ ಮಾಡಿಸುತ್ತೇವೆ ಎಂದರು. ಬಿಎಂಡಬ್ಲ್ಯೂ ನಲ್ಲಿ ಕೂರುವ ಯೋಚನೆ ಮಾಡಿದವರು ನಾವು. ಸೈಕಲ್ ರಿಕ್ಷಾ ತಗೊಂಡೆವು. ರೈಡ್ ಚೆನ್ನಾಗಿತ್ತು. ಖಾಲಿ ಖಾಲಿ ರಸ್ತೆಗಳು. ಎಲ್ಲಾ ಕಡೆ ಜನ. ನಮ್ಮ ರಿಕ್ಷಾ ಡ್ರೈವರ್ ನಮ್ಮನ್ನು ನೋಡಿಯೋ ಏನೋ ಹಿಂದಿ ಹಾಡುಗಳನ್ನು ಹಾಕಿದ. Maxmuller ನ ಅಪೇರಾ ಹೌಸ್ ನೋಡಿದೇವು. ಅಡಾಲ್ಫ್ ಹಿಟ್ಲರ್ ಸಭೆ ನಡೆಸುತ್ತಿದ್ದ Odeon place ಅನ್ನು ನೋಡಿದೆವು.ಅಲ್ಲಿ ಕಿಂಗ್ಸ್ ಗಾರ್ಡನ್ ಅನ್ನು ನೋಡಿದೆವು. ಗ್ಲೆಸಿಯರ್ ನಿಂದ ಹರಿಯುತ್ತಿದ್ದ ತೊರೆಗೆ ಅಡ್ಡ ಕಟ್ಟೆ ನಿರ್ಮಿಸಿ ಕೃತಕ ಅಲೆಗಳನ್ನು ಸೃಷ್ಟಿಸಿ ಅಲ್ಲಿ ಸ್ಕೀ ಮಾಡುತ್ತಿದ್ದ ಯುವಕರ ದಂಡನ್ನು ನೋಡಿದೆವು.
ಬವೇರಿಯಾದ ಅತೀ ಪ್ರಸಿದ್ಧ ಮೆನು ಅಂದರೆ Schweinshaxe. ಇದನ್ನು ಉಚ್ಚರಿಸಲು ನಾವು ಬಹಳ ಸಮಯ ತೆಗೆದುಕೊಂಡೆವು. ಸ್ವಯನ್ ಸಾಜ್ ಎನ್ನುವ ಇದು ಹ್ಯಾಮ್ಹಾಕ್ ಅಂದರೆ ಹಂದಿಯ ಕಾಲಿನಿಂದ ಮಾಡಿದ ಡಿಶ್. ನುಣ್ಣಗೆ ಅರೆದ ಪೊಟ್ಯಾಟೋ ಮ್ಯಾಶಿಂಗ್ ಮತ್ತು ರೆಡ್ ಕ್ಯಾಬೇಜ್ ನ ಗ್ರೇವಿ ಯೊಂದಿಗೆ ಸರ್ವ್ ಮಾಡುತ್ತಾರೆ. ಬೆಳ್ಳುಳ್ಳಿ, ಲವಂಗ ಮತ್ತು ಉಪ್ಪಿನ ಪುಡಿ ಯನ್ನುಸವರಿ ಮೂರು ಗಂಟೆಗಳ ತನಕ ಓವನ್ ನಲ್ಲಿ ಬೇಯಿಸಿದರೆ ಅಡುಗೆ ಮುಗಿಯಿತು. ನಾವು ಸಾಮಾನ್ಯವಾಗಿ ಪೋರ್ಕ್ ಅನ್ನು ಬಳಸುವುದಿಲ್ಲವಾದರೂ (ಮಡಿಕೇರಿಗೆ ಹೋದಾಗ ಅಲ್ಲಿ ಸ್ಥಳೀಯ ಸ್ನೇಹಿತರ ಬಲವಂತಕ್ಕೆ ರುಚಿ ನೋಡಿದ್ದು ಇದೆ ಮತ್ತು ಮಡಿಕೇರಿಯ ಚುರುಕು ಮೆಣಸಿನಕಾಯಿ ಹಾಕಿ ಮಾಡಿದ ಪಂದಿ ಪುಳಿ ಯನ್ನು ಮನಸಾರೆ ಮೆಚ್ಚಿದ್ದೂ ಉಂಟು). ಆದರೆ ಇಲ್ಲಿಯೂ ಜರ್ಮನಿಯ ಸ್ನೇಹಿತರು ಬವೇರಿಯದ ಈ ಫುಡ್ ಅನ್ನು ಟೇಸ್ಟ್ ಮಾಡಲೇ ಬೇಕೆಂದು ಒತ್ತಾಯಿಸಿದರ ಮೇರೆಗೆ ರಾತ್ರಿ ಊಟಕ್ಕೆ Schweinshaxe…ಎಷ್ಟು ಹೆವಿ ಮೀಲ್ ಎಂದರೆ ನಾನು ಆರ್ಡರ್ ಮಾಡಿದ ಫುಡ್ ನ ಅರ್ಧ ಭಾಗ ಮಾತ್ರ ಉಳಿಸಿ ಕೊಂಡು ಅರ್ಧ ಮಡದಿಗೆ ಕೊಟ್ಟರೆ ಆಕೆ ಅದರಲ್ಲಿ ಅರ್ಧ ತಾನು ಉಳಿಸಿಕೊಂಡು ಅರ್ಧ ಮಗಳಿಗೆ ಕೊಟ್ಟಳು
ಮುಂದುವರೆಯುವುದು. . . . . .