MYLANG BOOKS- ಓದಿನಲ್ಲಿ ತರುತ್ತಿದೆ ಹೊಸತನ

ಈ ಭಾನುವಾರ 01-03-2020ರ ಬೆಳಿಗ್ಗೆ 10.30 ಗಂಟೆಗೆ Indian Institute of World cultureನ ಸಭಾಂಗಣದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದ ಬಗ್ಗೆ ಸುಮಾರು ಮೂರು ತಿಂಗಳಿಂದ ಫೇಸ್‍ಬುಕ್‍ನಲ್ಲಿ, ಟ್ವಿಟರ್‍ನಲ್ಲಿ ಮಾತನಾಡಲಾಗುತ್ತಿತ್ತು. ನೆಟ್ಟಿಗರೂ ಕುತೂಹಲದಿಂದ ಎದುರು ನೋಡುವಂತೆ, ಆಯೋಜಕರು, ಈ ಕಾರ್ಯಕ್ರಮದ ಬಗ್ಗೆ ಅನೇಕ ರಸ ಪ್ರಶ್ನೆಗಳನ್ನು ಕೇಳುತ್ತಾ, ಕ್ವಿಜ್ ಸ್ಪರ್ಧೆಯನ್ನು ನಡೆಸುತ್ತಾ ಜನರ ತವಕ ಹೆಚ್ಚಾಗುವಂತೆ ಮಾಡಿದ್ದರು.

ಕೊನೆಗೂ ಆ ದಿನ ಬಂದೇ ಬಿಟ್ಟಿತು. ಅದು ಒಂದು ಪುಸ್ತಕ ಬಿಡುಗಡೆ ಸಮಾರಂಭ! ಅರೆ! ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಇಷ್ಟೊಂದು ಬಿಲ್ಡ್ ಅಪ್ ಕೊಡುತ್ತಿದ್ದೀರಾ ಅಂದರೆ ಹೌದು, ಇದು ಸಾಧಾರಣವಾಗಿ ಎಲ್ಲ ಕಡೆ ನಡೆಯುವ ಪುಸ್ತಕ ಬಿಡುಗಡೆ ಸಮಾರಂಭದಂತಲ್ಲ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ಕನ್ನಡದ ಪುಸ್ತಕ ಪ್ರಪಂಚದಲ್ಲಿ ಮೈಲಿಗಲ್ಲಾಗಬಲ್ಲ ಜನರ ಓದುವ ಅಭ್ಯಾಸಕ್ಕೆ ಹೊಸ ತಿರುವು ಕೊಡಬಲ್ಲ ಸಮಾರಂಭ.

ಕನ್ನಡದಲ್ಲಿ ಇ-ಬುಕ್‍ಗಳ ಅನಾವರಣದ ಸಂದರ್ಭ ಅದು. ಉತ್ಸಾಹಿ Software ಇಂಜಿನಿಯರುಗಳಾದ ಪವಮಾನ ಅಥಣಿ ಮತ್ತು ವಸಂತಶೆಟ್ಟಿಯವರ ಕನಸಿನ ಕೂಸು MYLANG BOOKS ಆ್ಯಪ್‍ನ ಉದ್ಘಾಟನೆ ಮತ್ತು ಲೇಖಕ ಜೋಗಿಯವರ ಅಶ್ವತ್ಥಾಮನ್ ಪುಸ್ತಕದ ಇ ಅವತರಣಿಕೆ, ಹಾರ್ಡ್ ಕಾಪಿ ಮತ್ತು ಆಡಿಯೋ ಅವತರಣಿಕೆಗಳ ಬಿಡುಗಡೆ. ಜೊತೆಗೆ ಹಲವಾರು ಲೇಖಕರ ಪುಸ್ತಕಗಳ ಇ-ಪ್ರತಿಗಳ ಬಿಡುಗಡೆ.

ಬೇರೆ ಎಲ್ಲಾ ಭಾಷೆಗಳಲ್ಲಿ ಇ-ಪುಸ್ತಕಗಳು ಫ್ಲಿಪ್‍ಕಾರ್ಟ್‍ನಲ್ಲಿ ಅಮೇಜಾನ್ ಕಿಂಡಲ್‍ನಲ್ಲಿ ಖರೀದಿಸಲು ಓದಲು ದೊರೆಯುತ್ತವೆ. ಆದರೆ ಅಲ್ಲಿ ಎಲ್ಲೂ ಕನ್ನಡದ ಪುಸ್ತಕಗಳು ಸಿಗುವುದಿಲ್ಲ. ಇ-ಪ್ರತಿಗಳೆಂದರೆ, ಪಿಡಿಎಫ್ ಕಾಪಿಗಳು ಸಿಗಬಹುದು. ಆದರೆ ಇ-ಪುಸ್ತಕಗಳನ್ನು ಮಾರ್ಕೆಟಿಂಗ್ ಮಾಡುವ ಮತ್ತು ಪ್ರಕಾಶಕರ ಹಾಗೂ ಲೇಖಕರ ಹಕ್ಕು ಸ್ವಾಮ್ಯವನ್ನು ಕಾಪಾಡಬಲ್ಲ ತಂತ್ರಜ್ಞಾನ ಕನ್ನಡದಲ್ಲಿ ಇರಲೇ ಇಲ್ಲ. ಈ ಕೊರತೆಯನ್ನು ಯಶಸ್ವಿಯಾಗಿ ತುಂಬಿಸಿ, ಕನ್ನಡ ಪುಸ್ತಕ ಪ್ರಪಂಚದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟವರು ಪವಮಾನ್ ಮತ್ತು ವಸಂತ್ ರವರು, ಈ ಉತ್ಸಾಹಿ ತರುಣರಿಗೆ ಎಲ್ಲಾ ಯಶಸ್ಸನ್ನು ಕೋರುತ್ತೇನೆ.
ಒಂದು ಇ-ಪುಸ್ತಕ ಅಷ್ಟೇ ಅಲ್ಲ, ಪುಸ್ತಕದ ಆಡಿಯೋ ಪ್ರತಿಗಳು ಕೂಡ ಮಾರ್ಕೆಟಿಂಗ್ ಮಾಡುವ ಹೊಸ ಪ್ರಯತ್ನ ಇವರದು. ಅದಕ್ಕಾಗಿ ಸುಸಜ್ಜಿತ ಸ್ಟುಡಿಯೋದಲ್ಲಿ, ಪರಿಣತರಿಂದ ಕಥೆಯನ್ನು ಓದಿಸಿ, ಅದರ ಆಡಿಯೋ ಪ್ರತಿಯನ್ನು ಕೂಡ ಬಿಡುಗಡೆ ಮಾಡುವರಿದ್ದರು ಇವರು. ವಶಿಷ್ಠ ಸಿಂಹ ತಮ್ಮ ಕಂಚಿನ ಕಂಠದಲ್ಲಿ ಅಶ್ವತ್ಥಾಮ ಪುಸ್ತಕವನ್ನು ಓದಿದ್ದಾರೆ.

ಅಂದು ವೇದಿಕೆಯ ಮೇಲೆ ಕನ್ನಡಪ್ರಭ ಸಂಪಾದಕರಾದ ರವಿ ಹೆಗ್ಗಡೆ, ರಂಗಶಂಕರದ ಅರುಂಧತಿನಾಗ್, ಸಿನಿಮಾ ನಟರಾದ ಅಚ್ಯುತ, ವಶಿಷ್ಠ ಮತ್ತು ಪ್ರಸಿದ್ಧ ಲೇಖಕರಾದ ಜೋಗಿರವರು ಉಪಸ್ಥಿತರಿದ್ದರೆ, ಪ್ರೇಕ್ಷಕರಲ್ಲಿ ಜಯಂತ ಕಾಯ್ಕಿಣಿ, ಕ್ಯಾಪ್ಟನ್ ಗೋಪಿನಾಥ, ಷಡಕ್ಷರಿ, ಬೋಳುವಾರು ಮಹಮ್ಮದ್ ಕುಂಞ, ಸುಬ್ಬರಾಯ ಚೊಕ್ಕಾಡಿ, ಸುಧಾ ಬೆಳವಾಡಿಯಂತಹ ಇನ್ನೂ ಅನೇಕ ಪ್ರಸಿದ್ಧ ನಾಮರು ಆಸೀನರಾಗಿದ್ದರು.
ಸಮಾರಂಭದಲ್ಲಿ ಜೋಗಿ ಮಾತನಾಡುತ್ತಾ ಒಂದು ಮಾತು ಹೇಳಿದರು, ‘ಎಲ್ಲೇ ಆದರೂ ಹೊಸದೊಂದು ಅವಿಷ್ಕಾರವಾಗುತ್ತಿದ್ದರೆ, ಅಲ್ಲಿ ನೀನು ಇರಬೇಕು’ ಎಂಬುದು ನನ್ನ ಗುರುಗಳು ಹೇಳಿಕೊಟ್ಟ ಮಾತು ಎಂದು.
ಇಂತಹ ಸಂದರ್ಭದಲ್ಲಿ ನಾನೂ ಇದ್ದೆ ಅನ್ನುವುದೇ ನನಗೆ ಹೆಮ್ಮೆಯಾಗಿದೆ. ಏಕೆಂದರೆ ಈ ಇ-ಬುಕ್‍ಗಳ ಪ್ರಕಾಶನದ ಪಟ್ಟಿಯಲ್ಲಿ ನನ್ನ ಎರಡು ಪುಸ್ತಕಗಳು ಸೇರ್ಪಡೆಯಾಗಿದ್ದವು, “ದೇವರ ಕಾಡು” ಮತ್ತು “ಪೋರ್ಡಿ” ನನ್ನ ಇನ್ನೊಂದು ಕೃತಿ “ಅಗರ್ತ” ಶೀಘ್ರದಲ್ಲಿಯೇ ಈ ಪಟ್ಟಿಗೆ ಸೇರಲಿದೆ.
ಕೇವಲ ಒಂದು ಸಾವಿರ ಪ್ರತಿಗಳ ಪುಸ್ತಕ ಮುದ್ರಣ ಮಾಡಿ, ಅದನ್ನು ಓದುಗರಿಗೆ ತಲುಪಿಸುವಷ್ಟರಲ್ಲಿ ಲೇಖಕರು ಹಣ್ಣಾಗಿ ಬಿಡುತ್ತಿದ್ದರು. ಎರಡನೇ ಮುದ್ರಣಕ್ಕೆ ಬಂದರೆ ಏನೋ ಸಾಧಿಸಿದ ತೃಪ್ತಿ. ಆದರೆ ಇ-ಪುಸ್ತಕ ಕ್ಷಣಾರ್ಧದಲ್ಲಿ ಇಡೀ ಪ್ರಪಂಚದ ಯಾವುದೇ ಮೂಲೆಯಲ್ಲಿ ಕನ್ನಡ ಪುಸ್ತಕ ಓದಬಲ್ಲವರ ಸ್ಮಾರ್ಟ್‍ಫೋನ್‍ನಲ್ಲಿ ಸಿಗುತ್ತದೆ ಎಂದರೆ ಅದು ಕ್ರಾಂತಿಯಲ್ಲವೆ?
ಕನ್ನಡ ಭಾಷೆಗೆ ತಂತ್ರಜ್ಞಾನ ತಡವಾಗಿಯೋ ಅಥವಾ ಸರಿಯಾದ ಸಮಯದಲ್ಲಿಯೋ ಬಂದಿದೆ. ಇದರಿಂದ ಮುದ್ರಣ ಕ್ಷೇತ್ರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ ರವಿಹೆಗ್ಗಡೆಯವರು ಹೇಳಿದಂತೆ, ಹೊಸದೊಂದು ಓದುಗ ವರ್ಗ ಸೃಷ್ಠಿಯಾಗುತ್ತದೆ. ಸಾವಿರ ಸಂಖ್ಯೆಯಲ್ಲಿದ್ದ ಓದುಗರನ್ನು ಲಕ್ಷ ಲಕ್ಷ ಸಂಖ್ಯೆಗೆ ಏರಿಸುತ್ತದೆ.

ಅದನ್ನು ನಿಜ ಮಾಡಬೇಕೆಂದರೆ, ತಾವುಗಳು ಪುಸ್ತಕಗಳನ್ನು ಖರೀದಿಸಿ ಓದಬೇಕು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.

  1. Google Play ಗೆ ಹೋಗಿ MYLANG BOOKS APP ಅನ್ನು ನಿಮ್ಮ ಮೊಬೈಲ್‍ಗೆ ಡೌನ್ ಲೋಡ್ ಮಾಡಿಕೊಳ್ಳಿ. ಆ್ಯಪ್ ಅನ್ನು ಇನ್‍ಸ್ಟಾಲ್ ಮಾಡಿ
  2. ನಿಮ್ಮ ಮೊಬೈಲ್ ನಂಬರಿನಿಂದ ರಿಜಿಸ್ಟರ್ ಮಾಡಿಕೊಳ್ಳಿ
  3. ಸಂಗ್ರಹದಲ್ಲಿರುವ ಪುಸ್ತಕಗಳಲ್ಲಿ ನಿಮಗೆ ಬೇಕಾದ ಪುಸ್ತಕವನ್ನು ಆಯ್ಕೆ ಮಾಡಿ
  4. ಆನ್ ಲೈನ್ ಪಾವತಿಸಿ.
  5. ನನ್ನ ಪುಸ್ತಕಗಳು ವಿಭಾಗದಲ್ಲಿ ನಿಮಗೆ ಬೇಕಾದಾಗ ಪುಸ್ತಕವನ್ನು ಓದಿ.

ನನ್ನ ಎರಡು ಪುಸ್ತಕಗಳ ಲಿಂಕ್ ಅನ್ನು ನೀಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿದರೆ ನಮಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಓದಿ, ಆನಂದಿಸಿ, ಏನಾದರೂ ಹೇಳುವುದಾದರೆ ಇಲ್ಲಿ ತಿಳಿಸಿ.

ದೇವರ ಕಾಡು ಬುಕ್ ಅನ್ನು download ಮಾಡಲು ಇಲ್ಲಿ ಕ್ಲಿಕ್ ಮಾಡಿ
https://mylang.in/collections/katha-sankalana/products/gurupada-belur-devara-kaadu-inr

ಫೋರ್ಡಿ ಬುಕ್ ಅನ್ನು download ಮಾಡಲು ಇಲ್ಲಿ ಕ್ಲಿಕ್ ಮಾಡಿhttps://mylang.in/collections/science-fiction/products/gurupada-belur-fordi-inr

MyLang app ನ download ಮಾಡಲು ಇಲ್ಲಿಗೆ ಹೋಗಿ

ಈ ಕೆಳಗೆ ಕೊಟ್ಟಿರುವ screenshots MyLang app download ಮಾಡಲು ಹಾಗು ನನ್ನ ಇ -ಪುಸ್ತಕ ಖರೀದಿಸಲು ನಿಮ್ಮ ಸಹಾಯಕ್ಕೆ ಬರಬಹುದು.

 

———————-

ಈ ಮೇಲಿನ ಹಾಗೆ ನಿಮಗೆ ಬಂದರೆ, ನೀನು MyLang app ಅನ್ನು ಸರಿಯಾಗಿ register ಮಾಡಿದ್ದೀರಾ ಎಂದರ್ಥ.

ಮುಂದೆ ನನ್ನ ಪುಸ್ತಕಗಳನ್ನು ಖರೀದಿಸಲು, ಈ ಕೆಳಕಂಡ ಲಿಂಕ್ ಗೆ ಹೋಗಿ, ಖರೀದಿಯನ್ನು ಪೂರ್ಣಗೊಳಿಸಿ.

ದೇವರ ಕಾಡು ಬುಕ್ ಅನ್ನು download ಮಾಡಲು ಇಲ್ಲಿ ಕ್ಲಿಕ್ ಮಾಡಿ
https://mylang.in/collections/katha-sankalana/products/gurupada-belur-devara-kaadu-inr

ಫೋರ್ಡಿ ಬುಕ್ ಅನ್ನು download ಮಾಡಲು ಇಲ್ಲಿ ಕ್ಲಿಕ್ ಮಾಡಿhttps://mylang.in/collections/science-fiction/products/gurupada-belur-fordi-inr

ಅಥವಾ, MyLang App ನಲ್ಲೆ ಈ ಕೆಳಕಂಡ ಸಂಗ್ರಹದಲ್ಲಿ ಸಿಗುವುದು.

  • ದೇವರ ಕಾಡು – ಕಥಾ ಸಂಕಲನ ಸಂಗ್ರಹದಲ್ಲಿ 
  • ಫೋರ್ಡಿ – ರೋಚಕ ಕಥೆಗಳು  (ಥ್ರಿಲ್ಲರ್) ಸಂಗ್ರಹದಲ್ಲಿ.


ಖರೀದಿ ಆದ ಬಳಿಕ, ನನ್ನ ಇ-ಬುಕ್ ಓದಲು, “ನನ್ನ ಪುಸ್ತಕಗಳು“ವಿಭಾಗಕ್ಕೆ ಹೋದರೆ, ಖರೀದಿಸಿದ ಪುಸ್ತಕಗಳು ಸಿಗುತ್ತವೆ.ಓದಿ, ಆನಂದಿಸಿ, ಏನಾದರೂ ಹೇಳುವುದಾದರೆ ಇಲ್ಲಿ ತಿಳಿಸಿ. ಧನ್ಯವಾದಗಳು.


Author: GurupadaBelur

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: