Design a site like this with WordPress.com
Get started

ಕರೋನ: ನಮಗೆ ಕಲಿಸಿದ್ದೇನು ?

ಇತ್ತೀಚಿನ ದಿನಗಳಲ್ಲಿ ಕರೋನ ವೈರಸ್‌ ನ ಕಾರಣದಿಂದ ನಡೆಯುತ್ತಿರುವ ನಾಗರೀಕ ಜಗತ್ತಿನ ಲಾಕ್‌ ಔಟ್‌ ನಿಂದಾಗಿ, ಪ್ರಕೃತಿಯಲ್ಲಿ ಬಂದಿರುವ ಬದಲಾವಣೆ ಅಚ್ಚರಿ ಮೂಡಿಸುತ್ತಿದೆ. ಊರಿನ ಚನ್ನಕೇಶವ ದೇವಸ್ಥಾನ ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತಿತ್ತು. ಜನರಿಲ್ಲದ ದೇವಸ್ಥಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಆದರೆ ಈಗ ಎಲ್ಲರಿಗೂ ರಜೆ ಇದ್ದರೂ ದೇವಸ್ಥಾನ ಮಾತ್ರ ಜನರಿಲ್ಲದೆ ಖಾಲಿಯಾಗಿತ್ತು.ನಾವು ಚಿಕ್ಕವರಿದ್ದಾಗ ದೇವಸ್ಥಾನದ ಅಂಗಳದಲ್ಲಿ ರಾತ್ರಿ ಹನ್ನೊಂದು ಗಂಟೆಯವರೆಗೂ ಆಡುತ್ತಿದ್ದೇವು. ಈಗೆಲ್ಲಾ ಏಳು ಗಂಟೆಗೆ ಎಲ್ಲರನ್ನೂ ಆಚೆ ಕಳುಹಿಸಿಬಿಡುತ್ತಾರೆ. ಕಳೆದ ವಾರ ಊರಿಗೆ ಹೋಗಿದ್ದಾಗ  ಅದೊಂದು ಹೊಸ ಅನುಭವ ನನಗೆ. ಗ್ರಹಣ ಹಿಡಿದ ಹಾಗೆ ಇಡೀ ಊರು ದೇವಸ್ಥಾನ ಎಲ್ಲವೂ ಖಾಲಿಯಾಗಿತ್ತು.

ನಿಸರ್ಗವನ್ನು ತನಗೆ ಬೇಕಾದಂತೆ ಪ್ರತಿದಿನ, ಪ್ರತಿ ಕ್ಷಣ ಬಳಸಿಕೊಳ್ಳುತ್ತಿದ್ದ ಮಾನವರಾದ ನಾವೆಲ್ಲಾ ವೈರಸ್‌ ಧಾಳಿಗೆ ಹೆದರಿ ಮನೆ ಸೇರಿಕೊಳ್ಳುತ್ತಿದ್ದಂತೆ, ಕ್ಷಣ ಕಾಲಕ್ಕಾದರೂ  ಆಕೆಯ ಮೇಲಿನ ನಮ್ಮ ಪ್ರಭುತ್ವ ಮರೆಯಾಗಿದ್ದು, ಪ್ರಕೃತಿ ಮಾತೆ ಮತ್ತೆ ತನ್ನ ನಿಜವೈಭವಕ್ಕೆ ಮರಳುತ್ತಿದ್ದಾಳೆ ಎಂದೆನಿಸಿಬಿಟ್ಟಿತು.

ಥಾಯ್‌ಲ್ಯಾಂಡ್ ನಲ್ಲಿ ಜನ ಮನೆ ಸೇರುತ್ತಿದ್ದಂತೆ ಬೀದಿಗಳಲ್ಲಿ ಮಂಗಗಳು ತಂಡೋಪತಂಡವಾಗಿ ದಾಳಿಯಿಟ್ಟಿದ್ದು, ಇಟಲಿಯಲ್ಲಿ ಪ್ರವಾಸಿ ತಾಣಗಳಾಗಿದ್ದ ಸಮುದ್ರ ತೀರಗಳಲ್ಲಿ ಡಾಲ್ಫಿನ್‌ ಗಳು ಕಾಣಿಸಿಕೊಂಡಿದ್ದು, ವಿಮಾನ ನಿಲ್ದಾಣಗಳಲ್ಲಿ ಬಾತು ಕೋಳಿಗಳ ಸಂಚಾರ ಇವೆಲ್ಲಾ ಗಮನಿಸಿದರೆ, ನಿಸರ್ಗವನ್ನು ಅತಿಕ್ರಮಿಸಿ ಸಹಜೀವಿಗಳನ್ನು ಹೊರಗಿಟ್ಟ ಮನುಷ್ಯನ ಮೇಲೆ ಕೋಪಗೊಂಡ ಪ್ರಕೃತಿ ನಮಗೆ ಆ ಪಾಠ ಕಲಿಸುತ್ತಿದೆಯೋ, ಅಥವಾ ನಮ್ಮನ್ನೇ ಹೊರಗಿಡುತ್ತಿದೆಯೋ ಮುಂದೆ ಕಾಲವೇ ಹೇಳಬೇಕು.

ನನ್ನ ಊರಿನಲ್ಲಿ ಈ ನಿಸರ್ಗದ ಮರುಸ್ಥಾಪನೆಯ ಪ್ರಕ್ರಿಯೆ ಕಂಡು ನಿಜಕ್ಕೂ ಅಚ್ಚರಿಗೊಳಗಾದೆ. ಬೆಳಿಗ್ಗೆ ಮನೆಯ ಮುಂದಿನ ವಿದ್ಯುತ್‌ ತಂತಿಗಳ ಮೇಲೆ ಸಾಲು ಸಾಲು ಹಕ್ಕಿಗಳು. ಗುಬ್ಬಚ್ಚಿಗಳೇನೋ ಎಂದುಕೊಂಡೆ. ಅದೇ ಜಾತಿಯ ಪುಟ್ಟ ಪುಟ್ಟ ಹಕ್ಕಿಗಳು. ನೂರಾರು ಹಕ್ಕಿಗಳು. ಯಾರ ಭಯವೂ ಇಲ್ಲದೆ ನಿರುಮ್ಮಳವಾಗಿ ಕುಳಿತ್ತಿದ್ದವು. ರಸ್ತೆಗಳ ಮೇಲೂ ಅವೇ. ಜನರಿಲ್ಲದ, ವಾಹನಗಳಿಲ್ಲದ ಬೀದಿಗಳಲ್ಲಿ ಗಿಜಿಗಿಜಿ ಅನ್ನುತ್ತಿದ್ದವು.

         ನಮ್ಮ ಮನೆಯಲ್ಲಿ ಗೇಟಿಗೆ ಒಂದು ಪಿವಿಸಿ ಪೈಪ್‌ ಅನ್ನು ಕಟ್ಟಿದ್ದೇವೆ. ಮಳೆಗಾಲದಲ್ಲಿ ಪೇಪರ್‌ ನವರು ಅಲ್ಲಿ ಇಲ್ಲಿ ಪೇಪರ್‌ ಎಸೆಯದೆ ಅದರೊಳಗೆ ಇಟ್ಟು ಹೋಗಲಿ ಅಂತ. ಆ ಪೈಪ್‌ ನ ಒಳಗೆ ಪುಟ್ಟ ಹಕ್ಕಿಯೊಂದು ಹುಲ್ಲು ಗರಿಗಳನ್ನು, ಅಲ್ಲಿ ಇಲ್ಲಿ ಬಿದ್ದ ಜುಂಗುಗಳನ್ನು ಕಚ್ಚಿಕೊಂಡು ಒಟ್ಟು ಮಾಡುತ್ತಿತ್ತು. ನಿನ್ನೆ ನೋಡಿದೆ. ಆ ಪೈಪ್‌ ನ ಒಳಗೆ ನಾಲ್ಕು ಪುಟ್ಟ ಮೊಟ್ಟೆಗಳು.

 ಸಂತೋಷವಾಗಿದ್ದು ಏನೆಂದರೆ ನಾವು ಅದರ ಮನೆಯನ್ನು ನೋಡುತ್ತಿದ್ದಾಗಲೇ ಆ ಹಕ್ಕಿ ನಮ್ಮನ್ನು ಲೆಕ್ಕಿಸದೆ ತನ್ನ ಪಾಡಿಗೆ ತಾನು ಗೂಡಿಗೆ ಬಂದಿದ್ದು. ನಮ್ಮನ್ನು ಅದು ವೈರಿಗಳನ್ನಾಗಿ ಪರಿಗಣಿಸಲಿಲ್ಲ ಅನ್ನುವುದೇ ನಮ್ಮ ಖುಷಿ.

ಅಷ್ಟೇ ಅಲ್ಲ, ಮನೆಯ ಮುಂದಿನ ಗಿಡಗಳಲ್ಲಿ ಬರಿಯ ಹಕ್ಕಿಯ ಗೂಡುಗಳೇ. ಅವೇ ಗಿಡದ ಕಾಯಿಗಳಂತೆ ಕಾಣುತ್ತಿದ್ದವು. ಕಿಟಕಿಯಲ್ಲಿ ಯಾವುದೊ ಹಕ್ಕಿಯೊಂದು ಕಟ್ಟಿದ ಗೂಡನ್ನು, ಈವರೆವಿಗೆ ಹಲವಾರು ಹಕ್ಕಿಗಳು ಬಾಡಿಗೆಗೆ ಪಡೆದು ಅಲ್ಲಿ ತಮ್ಮ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ದೊಡ್ಡದು ಮಾಡಿ ಮನೆ ಖಾಲಿ ಮಾಡಿವೆ. ಬೇರೆ  ಹಕ್ಕಿಗಳ ಸಂಸಾರ ಬಂದು ಅಲ್ಲಿ ಮತ್ತೆ ನೆಲೆ ಹೂಡುತ್ತಿವೆ. ಮನೆಯ ಬಳಿಯ ಕೆರೆಯಲ್ಲಿ ಎಲ್ಲಾ ಜಾತಿಯ ಹಕ್ಕಿಗಳದ್ದೇ ಸಾಮ್ರಾಜ್ಯ. ನೀರು ಹಕ್ಕಿಗಳು, ಕೊಕ್ಕರೆಗಳು, ಹದ್ದುಗಳು, ನೀರಿನಲ್ಲಿ ಅಲೆ ಎಬ್ಬಿಸಿ ಕುಣಿಯುವ ಮೀನುಗಳು, ಕಪ್ಪೆಗಳು. ಇವೆಲ್ಲವನ್ನೂ ನೋಡುತ್ತಾ ಕುಳಿತ ನನಗೆ ಅನ್ನಿಸಿದ್ದು. ನಾವೇಕೆ ನಮ್ಮ ತಾಯಿಯ ಮಡಿಲಿಂದ ದೂರವಾಗುತ್ತಿದ್ದೇವೆ.

ಪ್ರಸ್ತುತ ಕರೋನಾ ವೈರಸ್‌ ಮನುಕುಲದ ಮೇಲೆ ನಡೆಸುತ್ತಿರುವ ಧಾಳಿ, ಪ್ರಕೃತಿಯು ಮನಷ್ಯನಿಗೆ ನೀಡುತ್ತಿರುವ ಎಚ್ಚರಿಕೆ. ತನ್ನ ಸಮತೋಲನ ತಪ್ಪಿಸಬೇಡವೆಂದು ಸಾರಿ ಸಾರಿ ಹೇಳಿ ಮೊಳಗಿಸುತ್ತಿರುವ ಅಪಾಯದ ಗಂಟೆ.

ಬೇರೆ ಯಾವ ಜೀವಿಗಳಿಗೂ ಸಮಾನ ಬದುಕಿನ ಹಕ್ಕನ್ನು ನೀಡದ ಮಾನವನ ಅಹಂಕಾರಕ್ಕೆ ನಿಸರ್ಗ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಿದೆ  “ನೀನೂ ನನಗೆ ಅನಿವಾರ್ಯವಲ್ಲ”

ಈಗ ನಿಸರ್ಗವು ನಮ್ಮ ಉಸಿರ ಚೀಲವನ್ನು ಹಿಂಡಿ ಹೇಳುತ್ತಿರುವ ಈ ಎಚ್ಚರಿಕೆಯ ಮಾತುಗಳನ್ನು ನಾವು ನಮ್ರತೆಯಿಂದ ಕೇಳಿಸಿಕೊಳ್ಳಬೇಕಿದೆ. ಸಮಸ್ತ ಜೀವಿಗಳೊಂದಿಗೆ ನಾವು ಸಾಮರಸ್ಯದಿಂದ ಬಾಳುತ್ತೇವೆ ಎಂದು ನಾವು ಘಂಟಾಘೋಷದಿಂದ ಹೇಳಬೇಕಿದೆ.

ಅದಕ್ಕಾಗಿ ಈ ಭಾನುವಾರ ಸಂಜೆ 5 ಗಂಟೆಗೆ ನಾವೆಲ್ಲಾ ಮಾಡುವ ಚಪ್ಪಾಳೆ ಅಥವಾ ಘಂಟಾನಾದವು ನಮ್ಮನ್ನು ರಕ್ಷಿಸಲು ದುಡಿಯುತ್ತಿರುವ ವೈದ್ಯಕೀಯ ಮತ್ತು ರಕ್ಷಣಾ ಕ್ಷೇತ್ರದ ಬಾಂಧವರಿಗೆ ಅಷ್ಟೇ ಅಲ್ಲ, ಇದು ಪ್ರಕೃತಿಗೆ ನಾವು ಮಾಡುತ್ತಿರುವ ನಿವೇದನೆ ಎಂದುಕೊಳ್ಳೋಣ.

ನಿಸರ್ಗದ ಮುಂದೆ ಶಪಥ ಮಾಡೋಣ. ನಮ್ಮನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಎಲ್ಲ ಜೀವಿಗಳನ್ನೂ ಉಳಿಸಿಕೊಳ್ಳುತ್ತೇವೆ ಎಂದು.

ಮನುಕುಲದ ಒಳಿತಿಗಾಗಿ, ಪ್ರಕೃತಿಯ ಉಳಿವಿಗಾಗಿ.

Author: GurupadaBelur

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು

4 thoughts on “ಕರೋನ: ನಮಗೆ ಕಲಿಸಿದ್ದೇನು ?”

 1. Superb sir.specially clapping in the evening is not just for medical volunteers but also for nature is entirely a new thought aggreable by everyone.An eye opening writeup.thanks for sharing

  Like

 2. ನಿಜ ಸರ್, ನೀವು ಹಂಚಿಕೊಂಡಿರುವ ನಿಮ್ಮ ಅನುಭವವು ನಾವು ಹೇಗಿರಬೇಕು, ಪ್ರಕ್ರತಿನ ಉಳಿಸಬೇಕು, ಬೆಳೆಸಬೇಕು, ಅದನ್ನು ಹಾಳುಮಾಡದೇ ಸಮತೋಲನದಿಂದ ಕಾಪಾಡಿಕೊಂಡು ಹೋಗಬೇಕು ಅನ್ನೊದು ಅಕ್ಷರಶಾ: ಪಾಲಿಸಲೇ ಬೇಕಾದ ಸತ್ಯ. -ದನ್ಯವಾದಗಳು

  Like

 3. ಈ ಮನುಕುಲ ನಮ್ಮ / ತಮ್ಮ ಮನೋರಂಜನೆ ಪೂರೈಸಿಕೊಳ್ಳಲು ಶರವೇಗದಲ್ಲಿ ಹಣಸಂಪಾದನೆಗೋಸ್ಕರ ಈ ಪ್ರಕೃತಿಯನ್ನೇ ಮರೆತಿದ್ದ ಮನುಕುಲಕ್ಕೆ ಈ ಸಮಯ ಒಂದು ಸರಿಯಾದ ಪಾಠ. Really we should think for necessary steps to save the wonder world and it’s needs. Deep condolences to all families who lost their loved one.

  Thank you sir for the wonderful article

  Like

 4. Sir, you and your article is a true link message between olden( golden) and new ( being ruined) generation life style.
  What you experienced in these days about change in environment on corona effect is nothing but tip of iceberg which is alarming to go back to normal life with minimum natural need without human greed.
  In my view, corona stands for
  Co:_ co- operation
  R. :_required to follow
  O. :_original
  N. :_natures
  A. :_ adoptives .
  Otherwise, mother nature will take its own course of action for rebuilding this earth after vanishing everything.
  Once again thanks and hats off to you sir for giving alarming article with opening eye true’ examples

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: